January15, 2026
Thursday, January 15, 2026
spot_img

Home Remedies | ಭೇದಿ ಆಗ್ತಿದ್ಯಾ? ಈ ಮನೆಮದ್ದು ಟ್ರೈ ಮಾಡಿ, ಪಟ್ ಅಂತ ಹೊಟ್ಟೆ ಕ್ಲೀನ್ ಆಗೋಗುತ್ತೆ!

ಎಣ್ಣೆ, ಮಸಾಲೆಯುಕ್ತ ಊಟ, ನೀರು ಕಡಿಮೆ ಕುಡಿಯುವ ಅಭ್ಯಾಸ, ಒತ್ತಡ ಮತ್ತು ವ್ಯಾಯಾಮದ ಕೊರತೆಯಿಂದ ಅನೇಕರು ಭೇದಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ಭಾರವಾಗಿರುವ ಭಾವನೆ, ಮಲವಿಸರ್ಜನೆಗೆ ಕಷ್ಟ, ಅಸಹಜತೆ ಇವು ದಿನನಿತ್ಯದ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತವೆ. ಇಂತಹ ಸಂದರ್ಭದಲ್ಲಿ ಮಾತ್ರೆಗಳ ಹಿಂದೆ ಓಡುವುದಕ್ಕಿಂತ, ನಮ್ಮ ಅಡುಗೆಮನೆಯಲ್ಲಿ ಸಿಗುವ ಕೆಲವು ಸರಳ ಪದಾರ್ಥಗಳಿಂದಲೇ ಸುರಕ್ಷಿತ ಪರಿಹಾರ ಕಂಡುಕೊಳ್ಳಬಹುದು. ನಾಲ್ಕು ಸಾಮಾನ್ಯ ಪದಾರ್ಥಗಳಿಂದ ತಯಾರಿಸುವ ಈ ಕಷಾಯವು ಹೊಟ್ಟೆಯನ್ನು ಸಹಜವಾಗಿ ಶುದ್ಧಗೊಳಿಸಿ ಜೀರ್ಣಕ್ರಿಯೆ ಸರಾಗವಾಗಲು ಸಹಾಯ ಮಾಡುತ್ತದೆ.

ಕಷಾಯ ತಯಾರಿಸೋದು ಹೇಗೆ:

ಜೀರಿಗೆ, ಕೊತ್ತಂಬರಿ ಬೀಜ, ಸೋಂಪು ಮತ್ತು ಒಣ ಶುಂಠಿ ಈ ನಾಲ್ಕು ಪದಾರ್ಥಗಳನ್ನು ತಲಾ ಅರ್ಧ ಚಮಚದಷ್ಟು ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಅರ್ಧಕ್ಕೆ ಇಳಿದಾಗ ಸೋಸಿ ಬೆಚ್ಚಗಿರುವಾಗಲೇ ಸೇವಿಸಬೇಕು. ದಿನಕ್ಕೆ ಒಂದು ಬಾರಿ, ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.

ಈ ಕಷಾಯದ ಲಾಭಗಳು:
ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬರ, ಗ್ಯಾಸಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಲವನ್ನು ಮೃದುವಾಗಿಸಿ ಸುಲಭವಾಗಿ ವಿಸರ್ಜಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ಹೊಟ್ಟೆಗೆ ಹಗುರದ ಭಾವನೆ ನೀಡುತ್ತದೆ.

ಭೇದಿ ಸಮಸ್ಯೆ ಮರುಕಳಿಸದಂತೆ ಇರಲು ಕೆಲವು ಸಲಹೆಗಳು:
ದಿನಕ್ಕೆ ಕನಿಷ್ಠ 8–10 ಗ್ಲಾಸ್ ನೀರು ಕುಡಿಯಬೇಕು. ನಾರುಪದಾರ್ಥಗಳಿರುವ ಆಹಾರವನ್ನು ಹೆಚ್ಚು ಸೇರಿಸಬೇಕು. ಹಸಿರು ತರಕಾರಿಗಳು, ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ಅತಿಯಾಗಿ ಜಂಕ್ ಫುಡ್, ಎಣ್ಣೆಯುಕ್ತ ಆಹಾರ ತಿನ್ನುವುದನ್ನು ತಪ್ಪಿಸಬೇಕು. ಹಗುರವಾದ ವ್ಯಾಯಾಮ ಅಥವಾ ನಡಿಗೆ ಅಭ್ಯಾಸವು ಕೂಡ ಬಹಳ ಸಹಾಯಕ.

ನಿರಂತರವಾಗಿ ತೀವ್ರವಾದ ಭೇದಿ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಆದರೆ ಆರಂಭಿಕ ಹಂತದಲ್ಲಿ ಈ ನೈಸರ್ಗಿಕ ಕಷಾಯವು ಭೇದಿಗೆ ರಾಮಬಾಣವಾಗುತ್ತದೆ.

Most Read

error: Content is protected !!