ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿನ ಶ್ರದ್ಧಾ ಭೀಕರ ಹತ್ಯೆಯ ಕುರಿತು ಅನೇಕ ಸತ್ಯಗಳು ಹೊರಬರುತ್ತಿದ್ದು, ಲಿವ್ ಇನ್ ರಿಲೇಷನ್‌ನಲ್ಲಿದ್ದವಳನ್ನೇ ಅಫ್ತಾಬ್ ಏಕಾಏಕಿ ಹತ್ಯೆ ಮಾಡಿಲ್ಲ,ಬದಲಾಗಿ ನಿತ್ಯವೂ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರದ್ಧಾ ಗೆಳೆಯ ರಾಹುಲ್ ರೈ ಎಂಬುವರು ಅಫ್ತಾಬ್ ಕರಾಳ ಮುಖವನ್ನು ಬಯಲು ಮಾಡಿದ್ದು, 2020ರಲ್ಲಿಯೇ ಶ್ರದ್ಧಾ ಮೇಲೆ ಹಲ್ಲೆಯಾಗಿತ್ತು. ಆಕೆಗೆ ಗಾಯಗಳಾಗಿದ್ದವು. ನಾನೇ ಅವಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದೆ. ಎರಡರಿಂದ ಮೂರು ಬಾರಿ ಅಫ್ತಾಬ್ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಕುತ್ತಿಗೆ ಮೇಲೆ ಗಾಯದ ಕಲೆ ಇತ್ತು. ಆಗ ಪೊಲೀಸರೇ ಶ್ರದ್ಧಾಳನ್ನು ಮನೆಗೆ ಕಳುಹಿಸಿದ್ದರು ಎಂದು ಹೇಳಿದ್ದಾರೆ.