ಅಮೃತಯಾತ್ರೆ: ಮೊಟ್ಟೆಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ 3 ನೇ ಸ್ಥಾನದಲ್ಲಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಮೃತಯಾತ್ರೆಯ ಸಂದರ್ಭದಲ್ಲಿ ಹೇಳಿಕೊಳ್ಳಬಹುದಾದ ಇನ್ನೊಂದು ಸಾಧನೆಯೆಂದರೆ ತತ್ತಿಗಳ ಉತ್ಪಾದನೆಯಲ್ಲಿ ಸಾಧಿಸಿರೋ ಪ್ರಗತಿ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವೆರೆಗೆ ಹೆಚ್ಚೂ ಕಡಿಮೆ 100ಪಟ್ಟಿಗಿಂತಲೂ ಹೆಚ್ಚಾಗಿದೆ ಮೊಟ್ಟೆ ಉತ್ಪಾದನೆ.

1951 ರ ಹೊತ್ತಿಗೆ ಕೇವಲ 1.83 ಬಿಲಿಯನ್‌ ಮೊಟ್ಟೆಗಳಷ್ಟೇ ಉತ್ಪಾದನೆಯಾಗುತ್ತಿದ್ದವು. ಆದರೀಗ ಈ ಸಂಖ್ಯೆಯಲ್ಲಿ ಏರಿಕೆಯಾಗಿ 2020-21 ರ ಹೋತ್ತಿಗೆ 122.03 ಬಿಲಿಯನ್‌ ಗಳಷ್ಟು ಮೊಟ್ಟೆಗಳು ಉತ್ಪಾದನೆಯಾಗುತ್ತಿದೆ. ತಲಾವಾರು ಮೊಟ್ಟೆಗಳ ಸಂಖ್ಯೆಯು 1951 ರಲ್ಲಿ 5 ಮೊಟ್ಟೆಗಳಷ್ಟಿತ್ತು. ಅದು 2021ರ ಹೊತ್ತಿಗೆ 90 ಮೊಟ್ಟೆಗಳಷ್ಟಾಗಿದೆ.

ಮೊಟ್ಟೆಗಳ ಉತ್ಪಾದನೆಯಲ್ಲಿ ಭಾರತ ಇಂದು ಜಗತ್ತಿನಲ್ಲಿಯೇ 3 ನೇ ಸ್ಥಾನದಲ್ಲಿದೆ. ಪ್ರೋಟೀನ್‌, ವಿಟಾಮಿನ್‌ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಮೊಟ್ಟೆಗಳು ಹೊಂದಿವೆ. ಭಾರತದಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವಲ್ಲಿ ಮೊಟ್ಟೆಗಳ ಪಾತ್ರವೂ ಬಹಳ ಹಿರಿದಾದದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!