January16, 2026
Friday, January 16, 2026
spot_img

ಟಿ10 ಟೂರ್ನಿಯಲ್ಲಿ ರನ್ ಮಳೆ: ಕ್ವಾಲಿಫೈಯರ್-2ಗೆ ಲಗ್ಗೆ ಇಟ್ಟ ಯುಎಇ ಬುಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬುಧಾಬಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ10 ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಯುಎಇ ಬುಲ್ಸ್ ತಂಡವು ಅಬ್ಬರದ ಪ್ರದರ್ಶನ ನೀಡಿ, ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿದೆ. ಈ ಭರ್ಜರಿ ಗೆಲುವಿಗೆ ಮುಖ್ಯ ಕಾರಣರಾದವರು ಸ್ಪೋಟಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ ಮತ್ತು ಟಿಮ್ ಡೇವಿಡ್.

ಟಾಸ್ ಗೆದ್ದ ಅಜ್ಮಾನ್ ಟೈಟಾನ್ಸ್ ತಂಡದ ನಾಯಕ ಮೊಯೀನ್ ಅಲಿ ಬೌಲಿಂಗ್ ಆಯ್ಕೆ ಮಾಡಿಕೊಂಡದ್ದು, ಯುಎಇ ಬುಲ್ಸ್‌ಗೆ ವರದಾನವಾಯಿತು.

ಯುಎಇ ಬುಲ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್, ಆರಂಭದಿಂದಲೇ ಅಜ್ಮಾನ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 26 ಎಸೆತಗಳಲ್ಲಿ 7 ಸಿಕ್ಸರ್‌ಗಳು ಮತ್ತು 2 ಫೋರ್‌ಗಳ ನೆರವಿನಿಂದ 59 ರನ್ ಚಚ್ಚಿದರು.

ಇನ್ನು, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಟಿಮ್ ಡೇವಿಡ್ ಮತ್ತೊಂದು ಹಂತದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಎದುರಿಸಿದ್ದು ಕೇವಲ 13 ಎಸೆತಗಳನ್ನು, ಆದರೆ, ಆ ಎಸೆತಗಳಲ್ಲಿ 5 ಸಿಕ್ಸ್‌ಗಳು ಮತ್ತು 1 ಫೋರ್ ಸಹಿತ ಒಟ್ಟು 40 ರನ್ ಬಾರಿಸಿದರು. ಈ ಇಬ್ಬರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಯುಎಇ ಬುಲ್ಸ್ ತಂಡವು ನಿಗದಿತ 10 ಓವರ್‌ಗಳಲ್ಲಿ ಬೃಹತ್ ಮೊತ್ತವಾದ 162 ರನ್ ಕಲೆಹಾಕಿತು.

ಬೃಹತ್ ಗುರಿ ಬೆನ್ನತ್ತಿದ ಅಜ್ಮಾನ್ ಟೈಟಾನ್ಸ್ ಪರ ಅಲೆಕ್ಸ್ ಹೇಲ್ಸ್ (18 ಎಸೆತಗಳಲ್ಲಿ 35 ರನ್) ಉತ್ತಮ ಆರಂಭ ನೀಡಿದರೂ, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಅಂತಿಮವಾಗಿ ಟೈಟಾನ್ಸ್ ತಂಡವು 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಲಷ್ಟೇ ಶಕ್ತವಾಯಿತು.

ಪರಿಣಾಮ, ಯುಎಇ ಬುಲ್ಸ್ ತಂಡವು 47 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ, ಟೂರ್ನಮೆಂಟ್‌ನ ಮುಂದಿನ ಹಂತವಾದ ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿತು.

Must Read

error: Content is protected !!