ಹೊಸದಿಗಂತ ವರದಿ, ಕುಶಾಲನಗರ:
ವಿದ್ಯುತ್ ಆಘಾತಕ್ಕೆ ಒಳಗಾಗಿ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ ಹೆಬ್ಬಾಲೆಯಲ್ಲಿ ನಡೆದಿದೆ.
ಹೆಬ್ಬಾಲೆ ಗ್ರಾಮ ನಿವಾಸಿ ಮೊಗಣ್ಣ ಎಂಬವರ ಪುತ್ರ, ಚಿಕ್ಲಿಹೊಳೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹೆಚ್ ಎಂ ಗಿರೀಶ್(42) ಎಂಬವರೇ ಮೃತ ದುರ್ದೈವಿ.
ಹೆಬ್ಬಾಲೆ ಗ್ರಾಮದಲ್ಲಿ ನಡೆಯುತ್ತಿದ್ದ ಬನಶಂಕರಿ ಅಮ್ಮನವರ ಉತ್ಸವದ ಅಂಗವಾಗಿ ತಮ್ಮ ಮನೆಯ ಮೊದಲ ಅಂತಸ್ತಿಗೆ ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು. ಅದಕ್ಕೆ ಸರಬರಾಜಾಗುತ್ತಿದ್ದ ವಿದ್ಯುತ್ ಸ್ಪರ್ಶಗೊಂಡು ಗಿರೀಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ, ಅದು ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ.
ಹಾಸನ ಜಿಲ್ಲೆಯ ಕಡುವಿನಹೊಸಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಗಿರೀಶ್ ಅಗಲಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ