April 25, 2026
Saturday, April 25, 2026
spot_img

SHOCKING | ಕಾಪು ಬಳಿ ಭೀಕರ ಅಪಘಾತ: ನಾಲ್ವರ ದಾರುಣ ಸಾವು, ಹಲವರು ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯ ಕಾಪು ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರ ಕೊತಲ್ ಕಟ್ಟೆ ಪ್ರದೇಶದಲ್ಲಿ ಟೆಂಪೊವೊಂದು ಪಲ್ಟಿ ಹೊಡೆದು ನಾಲ್ವರು ಮೃತ ಪಟ್ಟು, ಹಲವರು ಗಾಯಗೊಂಡಿರುವ ಬೀಭತ್ಸ್ಯ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಅಲಂಕಾರಿಕ ಸಾಮಾಗ್ರಿ ಸಾಗಾಟ ಮಾಡುತ್ತಿದ್ದ ಟೆಂಪೊ ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಮೇಲೇರಿ ಸರ್ವಿಸ್ ರಸ್ತೆಗಿಳಿದು ಮಗುಚಿ ಬಿದ್ದಿದೆ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಕಾಪು ಪೊಲೀಸ್ ವೃತ್ತ ನಿರೀಕ್ಷಕರು, ಪಿಎಸ್ಸೈ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಗುರುತು ಹಾಗೂ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !