October 9, 2026
Friday, October 9, 2026
spot_img

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸವಾರರ ದಾರುಣ ಸಾ*ವು

ಹೊಸದಿಗಂತ ವರದಿ ಬಸವನಬಾಗೇವಾಡಿ:

ನಿಡಗುಂದಿ ರಸ್ತೆಯಲ್ಲಿ ರಾಠೋಡ ಅವರ ಜಮೀನಿನ ಸಮೀಪ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತ ಪಟ್ಟಿರುವ ಘಟನೆ ನಡೆದಿದೆ.

ಬಸವನಬಾಗೇವಾಡಿಯಿಂದ ನಿಡಗುಂದಿ ಕಡೆಗೆ ಹೊರಟಿದ್ದ ಬೈಕ್ ಹಾಗೂ ನಿಡಗುಂದಿಯಿಂದ ಬಸವನಬಾಗೇವಾಡಿ ಕಡೆಗೆ ಬರುತ್ತಿರುವ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.

ಇದನ್ನೂ ಓದಿ:

ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿ ಪರಶುರಾಮ ಯಮನಪ್ಪ ಮಾದರ(27) ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಿಹಳ್ಳ ತಾಂಡದ ನಿವಾಸಿ ಕುಮಾರ ರಾಮು ರಾಠೋಡ(24) ಮೃತಪಟ್ಟ ದುರ್ದೈವಿಗಳು.

ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಚಂದ್ರಕಾಂತ ನಂದರೆಡ್ಡಿ, ಪಿ.ಐ ಗುರುಶಾಂತ ದಾಶ್ಯಾಳ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read