ಹಿಟ್ ಆ್ಯಂಡ್ ರನ್ ಕೇಸ್ ನಿಂದ ಹೊರಬರಲು ಸಲ್ಮಾನ್ ಖಾನ್ ಮಾಡಿದ್ರು ಬರೋಬ್ಬರಿ 20-25 ಕೋಟಿ ರೂ. ಖರ್ಚು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟ ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಕೇಸ್ ನಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಅದಕ್ಕಾಗಿ ಜೈಲು ಶಿಕ್ಷೆ ಕೂಡ ಆಯಿತು. ಆ ಬಳಿಕ ಮುಂಬೈ ಹೈಕೋರ್ಟ್​ನಿಂದ ಅವರಿಗೆ ರಿಲೀಫ್ ಸಿಕ್ಕಿತು.

ಇದೆಲ್ಲಾ ಹಂತಗಳಿಗೆ ಸಲ್ಮಾನ್ ಖಾನ್ ಅವರುಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಿದ್ದರು ಅಂತೆ . ಈ ವಿಚಾರವನ್ನು ಅವರ ತಂದೆ ಸಲಿಮ್ ಖಾನ್ ಹೇಳಿದ್ದಾರೆ.

2002ರಲ್ಲಿ ಸಲ್ಮಾನ್ ಖಾನ್​ಗೆ ಸೇರಿದ ಕಾರು ಮುಂಬೈನ ಬಾಂದ್ರಾದಲ್ಲಿ ಪಾದಾಚಾರಿ ರಸ್ತೆ ಮೇಲೆ ನುಗ್ಗಿತ್ತು. ಅಲ್ಲಿ ಮಲಗಿದ್ದ ಅನೇಕರು ಮೃತಪಟ್ಟಿದ್ದರು. ಆ ಕಾರನ್ನು ಸಲ್ಮಾನ್ ಖಾನ್ ಕುಡಿದು ಓಡಿಸುತ್ತಿದ್ದರು ಎಂಬ ಆರೋಪ ಇತ್ತು. ಇದಕ್ಕಾಗಿ ಸೆಷನ್​ ಕೋರ್ಟ್​ 2015ರಲ್ಲಿ ಸಲ್ಮಾನ್ ಖಾನ್​ಗೆ ಐದು ವರ್ಷ ಜೈಲು ಶಿಕ್ಷೆ ಘೋಷಿಸಿತು. ಆ ಬಳಿಕ ಡಿಸೆಂಬರ್ 2015ರಂದು ಬಾಂಬೆ ಹೈಕೋರ್ಟ್ ಸಲ್ಮಾನ್ ಖಾನ್​ಗೆ ರಿಲೀಫ್ ನೀಡಿತು.

ಈ ವೇಳೆ ತಂದೆ ಸಲಿಮ್​ ಖಾನ್ ಅವರು ಮಾತನಾಡಿದ್ದು, ಎಲ್ಲರಿಗೂ ಖುಷಿಯಾಗಿದೆ. ಸಲ್ಮಾನ್ ಖಾನ್​ಗೆ ಕ್ಲೋಸ್ ಆಗಿರುವ ಪ್ರತಿಯೊಬ್ಬರಿಗೂ ಸಂತಸ ಆಗಿದೆ. ಕೆಲ ದಿನ ಸಲ್ಮಾನ್ ಜೈಲಿನಲ್ಲಿದ್ದ. ಅವನು ಈ ಕೇಸ್​ಗಾಗಿ 20-25 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಇದರ ಜತೆ ಬೆಟ್ಟದಷ್ಟು ಒತ್ತಡ ಕೂಡ ಇತ್ತು’ ಎಂದು ಅವರು ಹೇಳಿದ್ದರು.

ಈ ಮೂಲಕ ಕಾನೂನಿನೊಂದಿಗೆ ಅವರ ಗುದ್ದಾಟವು ಗುಪ್ತವಾಗಿ ಉಳಿದಿಲ್ಲ. ಸಲ್ಮಾನ್ ತಂದೆ ಸಲೀಂ ಖಾನ್ 2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ತನ್ನ ಮಗನ ಖುಲಾಸೆಗಾಗಿ ಮಿತವ್ಯಯವಿಲ್ಲದೆ ಖರ್ಚು ಮಾಡುವ ಬಗ್ಗೆ ಮಾತನಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!