ಹೊಸದಿಗಂತ ಡಿಜಿಟಲ್ ಡೆಸ್ಕ್
2008 ರ ಮುಂಬೈ ಭಯೋತ್ಪಾದಕ ದಾಳಿಯ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಇಡೀ ದೇಶವೇ ನೆನಪಿಸಿಕೊಳ್ಳುವ ವಿಷಯ. ಆ ಘಟನೆಗೆ ಕಾರಣರಾದವರನ್ನು ನ್ಯಾಯಾಲಯದ ಕಟಕಟೆಗೆ ತಂದು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಇಂದು ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿ ನಡೆದು 14 ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರವೂ ದಾಳಿಯನ್ನು ಯೋಜಿಸಿದವರಿಗೆ ಶಿಕ್ಷೆಯಾಗಿಲ್ಲ, ಅವರನ್ನು ನ್ಯಾಯಾಲಯದ ಕಟಕಟೆಗೆ ತರಲಾಗಿಲ್ಲ, ಇನ್ನು ನಾವು ಈ ವಿಷಯದ ಮೇಲೆ ಗಮನ ಹರಿಸಲಿದ್ದೇವೆಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
2008 ರಲ್ಲಿ, 10 ಲಷ್ಕರ್-ಎ-ತೊಯ್ಯಾ ಭಯೋತ್ಪಾದಕರು (ಎಲ್ಇಟಿ) 12 ಸಂಘಟಿತ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳನ್ನು ನಡೆಸಿ ಕನಿಷ್ಠ 166 ಜನರನ್ನು ಕೊಂದಿದ್ದರು. ಅಂದು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.