ಹೊಸದಿಗಂತ ಡಿಜಿಟಲ್ ಡೆಸ್ಕ್
ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯ ಬರ್ವಾಹಾ ಬಳಿ ಶನಿವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ನೆಲಕ್ಕೆ ಬಿದ್ದ ಘಟನೆ ನಡೆದಿದೆ.
ಇನ್ನು ಈ ಘಟನೆಗೆ ಕಾರಣ ಬಿಜೆಪಿ (BJP) ಎಂದು ಕಾಂಗ್ರೆಸ್ ಆರೋಪಿಸಿದೆ.
ಭಾರತ್ ಜೋಡೋ ಪಾದಯಾತ್ರೆ ನಡುವೆ ಚಹಾ ವಿರಾಮಕ್ಕೆಂದು ರಸ್ತೆಬದಿಯ ರೆಸ್ಟೋರೆಂಟ್ಗೆ ಚಲಿಸುತ್ತಿದ್ದಾಗ ದಿಗ್ವಿಜಯ್ ಸಿಂಗ್ ಅವರು ಕೆಳಗೆ ಬಿದ್ದು, ಗಾಯಗೊಂಡಿದ್ದಾರೆ. ಈ ವೇಳೆ ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ದಿಗ್ವಿಜಯ್ ಸಿಂಗ್ ಅವರ ಕೈ ಹಿಡಿದು ಮೇಲಕ್ಕೆತ್ತಿ ಸಹಾಯ ಮಾಡಿದ್ದಾರೆ.
अरे ये कैसा अनुशासन…?
यात्रा में धक्का मुक्की से वरिष्ठ नेता गिर रहे है…
चलो हटो यहाँ से… pic.twitter.com/mazFezGR1Q
— Narendra Saluja (@NarendraSaluja) November 26, 2022
ಭಾರತ್ ಜೋಡೋ ಯಾತ್ರೆಯ ವೇಳೆ ದಿಗ್ವಿಜಯ ಸಿಂಗ್ ಇದುವರೆಗೆ ನಾಲ್ಕು ಬಾರಿ ನೆಲಕ್ಕೆ ಬಿದ್ದಿದ್ದಾರೆ. ಆದರೆ, ಅವರು ಮಧ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ಬಿದ್ದಿದ್ದು, ಇದಕ್ಕೆ ಹದಗೆಟ್ಟ ರಸ್ತೆಗಳೆ ಕಾರ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.