ಹೊಸದಿಗಂತ ಡಿಜಿಟಲ್ ಡೆಸ್ಕ್
ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರೀಕ್ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಎಂಬುದರ ಬಗ್ಗೆ ಪೋಲಿಸರಿಗೆ ಮಾಹಿತಿ ಲಭಿಸಿದ್ದು, ಮಂಗಳೂರು ಪೋಲಿಸರ ತಂಡ ಶನಿವಾರ ಉಡುಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ರಥಬೀದಿಯಲ್ಲಿ ಸುತ್ತಾಡಿದ್ದ ಶಾರೀಕ್
2022 ರ ಅಕ್ಟೋಬರ್ 11 ರಂದು ಶ್ರೀ ಕೃಷ್ಣ ಮಠ ಹಾಗು ಉಡುಪಿಯ ರಥಬೀದಿಯಲ್ಲಿ ಶಾರೀಕ್ ಸುತ್ತಾಡಿರುವ ಬಗ್ಗೆ ಮಾಹಿತಿ ಲಭಿಸಿದ ಆಧಾರದಲ್ಲಿ ಮಂಗಳೂರು ಪೋಲಿಸರ ತಂಡ ಉಡುಪಿ ಶ್ರೀ ಕೃಷ್ಣ ಮಠ, ರಥಬೀದಿ ಪರಿಸರದಲ್ಲಿ ತಪಾಸಣೆ ನಡೆಸಿದ್ದಾರೆ.
ಮೊಮ್ಮಗನಿಗೆ ಕರೆ ಮಾಡಿದ್ದ ಮಹಿಳೆ
ಉಡುಪಿ ರಥಬೀದಿಯಲ್ಲಿ ಶಾರೀಕ್ ಸುತ್ತಾಡುತ್ತಿದ್ದ ವೇಳೆ ಈ ಪರಿಸರದಲ್ಲಿ ಹೆಚ್ಚಾಗಿ ವಾಸಿಸುವ ಅರೆ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮೊಮ್ಮಗನಿಗೆ ಕರೆ ಮಾಡುತ್ತೇನೆ ಎಂದು ಒತ್ತಾಯ ಪೂರ್ವಕವಾಗಿ ಶಾರೀಕ್ ನಿಂದ ಮೊಬೈಲ್ ಪಡೆದು ಕರೆ ಮಾಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಶಾರೀಕ್ ನ ಮೊಬೈಲ್ ಪರಿಶೀಲಿಸುತ್ತಿದ್ದ ಪೋಲಿಸರಿಗೆ ಈ ಮಾಹಿತಿ ಲಭಿಸಿದ್ದು, ಉಡುಪಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನಿಂದ ತನಿಖೆಗೆಂದು ಆಗಮಿಸಿದ ಪೋಲಿಸರಿಗೆ ಶ್ರೀಕೃಷ್ಣ ಮಠದಲ್ಲಿ ತಿಂಗಳ ಹಿಂದಿನ ಸಿಸಿಟಿವಿ ದೃಶ್ಯಗಳು ಲಭಿಸಿಲ್ಲ. ಹೀಗಾಗಿ ರಥಬೀದಿ ಸುತ್ತಲಿನ, ಅಂಗಡಿ, ಹೊಟೇಲ್ ಲಾಡ್ಜ್ ಗಳ ಸಿಸಿಟಿವಿ ದೃಶ್ಯವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.