ಹೊಸದಿಗಂತ ವರದಿ, ವಿಜಯಪುರ:
ಮಹಾರಾಷ್ಟ್ರ ನೆಲದಲ್ಲಿ ಕನ್ನಡ ಧ್ವಜ ಹಾರಿಸಿ, ಪುಂಡರ ವಿರುದ್ಧ ಕನ್ನಡಿಗರು ತೊಡೆ ತಟ್ಟಿರುವ ಘಟನೆ ಜಿಲ್ಲೆಯ ಗಡಿ ಭಾಗದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗಡಿ ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದ ಗ್ರಾಮದಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು, ಗ್ರಾಮದ ಮುಖ್ಯ ದ್ವಾರಕ್ಕೆ ಕನ್ನಡ ಬಾವುಟವನ್ನು ಗ್ರಾಮಸ್ಥರು ಕಟ್ಟಿದ್ದಾರೆ.
ಗ್ರಾಮಸ್ಥರು, ಕನ್ನಡ ಬಾವುಟ ಕಟ್ಟಿ, ಜೈ ಕರ್ನಾಟಕ ಎಂದು ಜಯಘೋಷ ಕೂಗಿದ್ದು, ಮೊದಲು ಅಭಿವೃದ್ಧಿ ಕಡೆಗೆ ಗಮನಕೊಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮರಾಠಿ ನೆಲದ ಕನ್ನಡಿಗರು ಎಚ್ಚರಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ಇಲ್ಲಿನ ಕನ್ನಡಿಗರು ನೀರು ಕೊಡಿ, ಇಲ್ಲ ಕರ್ನಾಟಕಕ್ಕೆ ಸೇರಿಸಿ ಎಂದು ಹೋರಾಟ ಮಾಡಿ ಪಾದಯಾತ್ರೆ ಮಾಡಿದ್ದರು.