ಹೊಸದಿಗಂತ ಡಿಜಿಟಲ್ ಡೆಸ್ಕ್
ವಿಶ್ವದಲ್ಲಿ ಅನೇಕರಿಗೆ ಹತ್ತಿರವಾದ ಸಾಮಾಜಿಕ ಜಾಲತಾಣ ಅಂದರೆ ವಾಟ್ಸ್‌ಆಯಪ್ (WhatsApp). ಇದೀಗ ಈ ಸೋಶಿಯಲ್ ಮೀಡಿಯಾದ ಮೇಲೆ ಕನ್ನ ಬಿದ್ದಿದೆ.
ಹೌದು, ಸುಮಾರು 500 ಮಿಲಿಯನ್ (50 ಕೋಟಿ) WhatsApp ಬಳಕೆದಾರರ ನಂಬರ್ ಮೇಲೆ ಅನ್ನು ಕದ್ದು, ಬಳಕೆದಾರರ ಮಾಹಿತಿಯನ್ನು ಮಾರಾಟಕ್ಕೆ ಇಟ್ಟ ಘಟನೆ ನಡೆದಿದೆ.
ಹ್ಯಾಕರ್ಸ್ ಕಮ್ಯುನಿಟಿಯು ಅಮೆರಿಕ, ಇಂಗ್ಲೆಂಡ್, ಇಟಲಿ, ಈಜಿಪ್ಟ್ ಮತ್ತು ಭಾರತವು ಸೇರಿದಂತೆ 84 ರಾಷ್ಟ್ರಗಳ ವಾಟ್ಸ್‌ಆಯಪ್ ಸಕ್ರಿಯ ಬಳಕೆದಾರರ ಮಾಹಿತಿಯನ್ನು 7 ಸಾವಿರ ಡಾಲರ್, 2,500 ಡಾಲರ್ ಮತ್ತು 2 ಸಾವಿರ ಡಾಲರ್‌ಗೆ ಮಾರಾಟಕ್ಕೆ ಇಟ್ಟಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ, ಅಮೆರಿಕದ 32 ಮಿಲಿಯನ್, ಇಂಗ್ಲೆಂಡ್‌ನ 11.5 ಮಿಲಿಯನ್ ವಾಟ್ಸ್‌ಆಯಪ್ ಫೋನ್ ನಂಬರ್ಸ್ ಹ್ಯಾಕ್ ಮಾಡಲಾಗಿದೆ. ಅದ್ರಲ್ಲೂ ಈಜಿಪ್ಟ್‌ನ ಹೆಚ್ಚು ಬಳಕೆದಾರರು ಈ ಜಾಲಕ್ಕೆ ಬಲಿಯಾಗಿದ್ದಾರೆ. 45 ಮಿಲಿಯನ್ ಈಜಿಪ್ಟ್ ಬಳಕೆದಾರರ ಮಾಹಿತಿಯನ್ನು ಕದಿಯಲಾಗಿದೆ.
ಇನ್ನು ಇಟಲಿಯ 35 ಮಿಲಿಯನ್, ರಷ್ಯಾದ 10 ಮಿಲಿಯನ್ ಮತ್ತು ಭಾರತದ 6 ಮಿಲಿಯನ್ ವಾಟ್ಸ್‌ಆಯಪ್ ಬಳಕೆದಾರರ ನಂಬರ್ ಮಾಹಿತಿಯನ್ನು ಕದಿಯಲಾಗಿದೆ. ಕದ್ದ ಮಾಹಿತಿಯನ್ನು ಹ್ಯಾಕರ್ಸ್ ಕಮ್ಯುನಿಟಿ ಮಾರಾಟಕ್ಕೆ ಇಟ್ಟಿದೆ.
ಇದೊಂದು ‘ಸ್ಕ್ರ್ಯಾಪಿಂಗ್’ ಮಾರ್ಗವಾಗಿರಬಹುದು ಎಂದು ಹೇಳಲಾಗುತ್ತಿದೆ. ತಂತ್ರವು ಪ್ರಮಾಣದಲ್ಲಿ ಡೇಟಾವನ್ನು ಕೊಯ್ಲು ಮಾಡುವುದು, ಆಗಾಗ್ಗೆ ಬಾಟ್‌ಗಳನ್ನು ಬಳಸುವುದು ಮತ್ತು ವಾಟ್ಸ್‌ಆಯಪ್‌ನ ಸೇವಾ ನಿಯಮಗಳನ್ನು ಉಲ್ಲಂಘಿಸುವುದನ್ನು ಒಳಗೊಂಡಿರುತ್ತದೆ.