ವಿದೇಶಾಂಗ ಕಾರ್ಯದರ್ಶಿ ‘ವಿನಯ್ ಕ್ವಾತ್ರಾ’ ಅವರ ಅಧಿಕಾರವಧಿ 14 ತಿಂಗಳು ವಿಸ್ತರಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರಿಗೆ ಡಿಸೆಂಬರ್ 31 ರಂದು ನಿವೃತ್ತಿಯ ದಿನಾಂಕ ಮೀರಿ 14 ತಿಂಗಳ ಅವಧಿಯನ್ನು ವಿಸ್ತರಿಸಿದೆ. ಈ ನಿರ್ದೇಶನವನ್ನು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ದೃಢಪಡಿಸಲಾಗಿದೆ.

ವಿದೇಶಾಂಗ ಕಾರ್ಯದರ್ಶಿಯಾಗಿ ವಿನಯ್ ಮೋಹನ್ ಕ್ವಾತ್ರಾ ಅವರ ಸೇವಾವಧಿಯನ್ನು ಅವರ ನಿವೃತ್ತಿಯ ದಿನಾಂಕದ ನಂತರ ಅಂದರೆ 31.12.2022 ರವರೆಗೆ ಅಂದರೆ 30.04.2024 ರವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅದನ್ನ ವಿಸ್ತರಿಸಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ’ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಭಾರತದ ನೆರೆಹೊರೆ ಮತ್ತು ಯುಎಸ್, ಚೀನಾ ಮತ್ತು ಯುರೋಪ್ನೊಂದಿಗೆ ವ್ಯವಹರಿಸುವುದರಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿರುವ ಕ್ವಾತ್ರಾ, ಪ್ರಸ್ತುತ ನರೇಂದ್ರ-ಮೋದಿ ಸರ್ಕಾರದ ಅವಧಿ 2024 ರಲ್ಲಿ ಕೊನೆಗೊಳ್ಳುವವರೆಗೂ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!