ಹೊಸದಿಗಂತ ಡಿಜಿಟಲ್ ಡೆಸ್ಕ್
ಸೆಪ್ಟೆಂಬರ್ 16 ರಂದು ಮಾಹ್ಸಾ ಅಮಿನಿ ಎಂಬ ಯುವತಿ ಹಿಜಾಬ್ ಸರಿಯಾಗಿ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾಗಿ ನೈತಿಕ ಪೊಲೀಸರ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಇರಾನ್ ನಲ್ಲಿ ಭುಗಿಲೆದ್ದ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರದ ರೆವಲ್ಯೂಷನರಿ ಗಾರ್ಡ್ಸ್ ಜನರಲ್ ಮಂಗಳವಾರ ಒಪ್ಪಿಕೊಂಡಿದ್ದಾರೆ.
“ಆ ಮಹಿಳೆಯ ಸಾವಿನಿಂದ ದೇಶದ ಪ್ರತಿಯೊಬ್ಬರೂ ಪ್ರಭಾವಿತರಾಗಿದ್ದಾರೆ. ಇತ್ತೀಚಿನ ಅಂಕಿಅಂಶಗಳು ನನ್ನ ಬಳಿ ಇಲ್ಲ, ಆದರೆ ಈ ಘಟನೆಯಿಂದ ಈ ದೇಶದಲ್ಲಿ ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರನ್ನು ನಾವು ಕೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ.” ಗಾರ್ಡ್ಸ್ ಏರೋಸ್ಪೇಸ್ ವಿಭಾಗದ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಅಮೀರಲಿ ಹಾಜಿಜಾದೆ ಅವರು ಮೆಹರ್ ಸುದ್ದಿ ಸಂಸ್ಥೆ ಪ್ರಕಟಿಸಿದ ವೀಡಿಯೊದಲ್ಲಿ ಹೇಳಿದ್ದಾರೆ.
ಪ್ರತಿಭಟನಾಕಾರರು ಪೊಲೀಸರು, ಸೇನಾಪಡೆಗಳೊಂದಿಗಿನ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟರು ಎಂದು ಅವರು ಹೇಳಿದ್ದಾರೆ.
ʼಇತ್ತೀಚೆಗೆ ಇರಾನ್ ನ ಟೋಲ್ ಓಸ್ಲೋ ಮೂಲದ ಮಾನವ ಹಕ್ಕುಗಳ ಗುಂಪು ಪ್ರಕಟಿಸಿದ ವರದಿಯಲ್ಲಿ ಹಿಜಾಬ್ ಪ್ರತಿಭಟನೆಗಳಿಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಕನಿಷ್ಠ 416 ಪ್ರತಿಭಟನಾಕಾರರು ಕೊಲ್ಲಲ್ಪಟ್ಟಿದ್ದಾರೆ” ಎಂಬ ಅಂಕಿ ಅಂಶಕ್ಕೆ ಇದು ಹೆಚ್ಚು ಹತ್ತಿರದಲ್ಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ