ಹೊಸದಿಗಂತ ಡಿಜಿಟಲ್ ಡೆಸ್ಕ್
ಗೋವಾದಲ್ಲಿ ನಡೆದ ಭಾರತೀಯ ಚಲನ ಚಿತ್ರೋತ್ಸವದಲ್ಲಿ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಕಾಶ್ಮೀರಿ ಫೈಲ್ಸ್ ಚಿತ್ರವನ್ನು ʼತಪ್ಪು ಪ್ರಚಾರʼ ಮತ್ತು ʼಅಶ್ಲೀಲʼ ಎಂದು ಬಣ್ಣಿಸಿದ್ದು ದೊಡ್ಡ ವಿವಾದವೆಬ್ಬಿಸಿದೆ. ಈ ಕುರಿತು ಟ್ವಿಟರ್ ನಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ʼಸತ್ಯವು ಅತ್ಯಂತ ಅಪಾಯಕಾರಿ ಆದುದ್ದಾಗಿದೆ, ಏಕೆಂದರೆ ಅದು ಜನರು ಸುಳ್ಳು ಹೇಳುವಂತೆ ಮಾಡುತ್ತದೆʼ ಎಂದು ಹೇಳಿದ್ದಾರೆ.
ಇದಕ್ಕಿಂತ ಮುಂಚೆ ವಿವಾದದ ಕುರಿತಾಗಿ ಮಾತನಾಡಿದ್ದ “ದಿ ಕಾಶ್ಮೀರ್ ಫೈಲ್ಸ್” ನಟ ಅನುಪಮ್ ಖೇರ್ ʼಸತ್ಯವು ಯಾವಾಗಲೂ ಸುಳ್ಳನ್ನು ತಳ್ಳಿಹಾಕುತ್ತದೆʼ ಎಂದು ಹೇಳಿದ್ದರು. ಆ ಬಳಿಕ ಅಗ್ನಿಹೋತ್ರಿ ಅವರ ಪ್ರತಿಕ್ರಿಯೆ ಬಂದಿದೆ. ಗೋವಾದಲ್ಲಿ ಸೋಮವಾರ ರಾತ್ರಿ ನಡೆದಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಲ್ಯಾಪಿಡ್ ಅವರು ಕಾಶ್ಮೀರ್ ಫೈಲ್ಸ್ ಅನ್ನು ಕೆಟ್ಟ ಚಿತ್ರವೆಂದು ಕರೆದಿದ್ದರು. ಈ ಚಿತ್ರವನ್ನು ಉತ್ಸವದಲ್ಲಿ ಪ್ರದರ್ಶಿಸುವುದನ್ನು ನೋಡಿ “ಆಘಾತಕ್ಕೊಳಗಾಗಿದ್ದೇವೆ” ಎಂದು ಹೇಳಿದರು. ಅವರು ಐಎಫ್ಎಫ್ಐನ ಅಂತರರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ್ದ “ದಿ ಕಾಶ್ಮೀರ್ ಫೈಲ್ಸ್” ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದ ನರಮೇದದ ಬಳಿಕ ಕಾಶ್ಮೀರಿ ಹಿಂದೂಗಳು ಕಾಶ್ಮೀರದಿಂದ ವಲಸೆ ಹೋಗುವುದನ್ನು ಚಿತ್ರಿಸುತ್ತದೆ.
ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ. ಈ ಚಿತ್ರವನ್ನು IFFI ನಲ್ಲಿ ಭಾರತೀಯ ಪನೋರಮಾ ವಿಭಾಗದ ಭಾಗವಾಗಿ ಪ್ರದರ್ಶಿಸಲಾಯಿತು. ಈ ಸಮಾರಂಭದಲ್ಲಿ ಖೇರ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಉಪಸ್ಥಿತರಿದ್ದರು. ಲಾಪಿಡ್ ಅವರ ಕಾಮೆಂಟ್ಗಳು ಸಾಮಾಜಿಕ ತಾಣಗಳಲ್ಲಿ ತೀವ್ರ ಟೀಕೆ ಎದುರಿಸುವುದರ ಜೊತೆಗೆ ವಿವಾದವನ್ನು ಹುಟ್ಟುಹಾಕಿದವು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ