ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಚಿತಾಪುರ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಕ್ಷ ಅರಳಿಸಲು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ತಿರುಪತಿ ತಿಮ್ಮಪ್ಪನ ಮೆಟ್ಟಿಲುಗಳನ್ನು ಮೊಣಕಾಲಿನಿಂದ ಹತ್ತಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾಥ೯ನೆ ಸಲ್ಲಿಸಿದರು.
ತಿರುಪತಿ ತಿಮ್ಮಪ್ಪನ ಸಪ್ತಗಿರಿ ಬೆಟ್ಟವನ್ನು ಮೊಣಕಾಲಿನಿಂದ ಹತ್ತಿ ವಿಶೇಷ ಪೂಜೆ ಸಲ್ಲಿಸಿ,ಶತಾಯಗತಾಯವಾಗಿ ಕಾಂಗ್ರೆಸ್ ಪಕ್ಷ ಕೆಡವಲು ತಮ್ಮ ಹರಕೆಯನ್ನು ಸಲ್ಲಿಸಿದರು.
ಕ್ಷೇತ್ರದ ಜನರ ಒಳಿತಿಗಾಗಿ ತಾಲೂಕಿನಲ್ಲಿ ಸುಖ ಸಮೃದ್ಧಿ ನೆಲೆಸಲಿ. ಚಿತ್ತಾಪುರ ತಾಲೂಕಿನ ಜನರಿಗೆ ಯಾವುದೇ ರೀತಿಯ ಕಷ್ಟಕಾರ್ಪಣ್ಯಗಳು ಬರದಂತೆ, ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಣಿಕಂಠ ರಾಠೋಡ್ ಅವರು ಮೊಳಕಾಲಿನ ಮೂಲಕ ಪಾದಯಾತ್ರೆ ಮಾಡುವ ಮೂಲಕ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥಿಸಿಕೊಂಡರು.
ಇನ್ನೂ ಚಿತ್ತಾಪುರ ಕ್ಷೇತ್ರದಲ್ಲಿ ಶಾಸಕ ಪ್ರಿಯಾಂಕ್ ಖಗೆ೯ ಸೋಲಿಸುವುದೊಂದೆ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ಪಕ್ಷ ಹೇಳಿದ ಬೆನ್ನಲ್ಲೇ, ಮುಖಂಡ ಮಣಿಕಂಠ ರಾಠೋಡ ತಿಮ್ಮಪ್ಪನ ಬಳಿ ಬೇಡಿಕೊಂಡಿದ್ದಾರೆ.