ಶಬರಿಮಲೆ ಅಯ್ಯಪ್ಪನ ಶ್ರೀಕ್ಷೇತ್ರಕ್ಕಿನ್ನು ‘ಅಟೋ, ಟ್ರಕ್ ಯಾತ್ರಿ’ಗಳಿಗೆ ನೋ ಎಂಟ್ರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಡಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಟೋ ರಿಕ್ಷಾ, ಸರಕು ಸಾಗಾಟ ವಾಹನಗಳಲ್ಲಿ ಪ್ರವಾಸ ನಡೆಸಲು ರಾಜ್ಯ ಮೋಟಾರು ವಾಹನ ಇಲಾಖೆ ನಿಷೇಧ ವಿಧಿಸಿದೆ.
ಅಟೋ ಹಾಗೂ ಸರಕು ಸಾಗಾಟ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ. ನಿಯಮಗಳ ಅನುಸಾರ ಆಟೋ ರಿಕ್ಷಾಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯ 30 ಕಿ.ಮೀ ವ್ಯಾಪ್ತಿ ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ. ಇನ್ನು ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲೂ ಅವಕಾಶವಿಲ್ಲ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಲು ಇಲಾಖೆ ಮುಂದಡಿಯಿಟ್ಟಿದೆ.
ಶಬರಿಮಲೆ ಕ್ಷೇತ್ರದಟ್ಟು 400 ಕಿ.ಮೀ ವ್ಯಾಪ್ತಿಯನ್ನು ಸೇಫ್ ಝೋನ್ ಆಗಿ ಘೋಷಿಸಲಾಗಿದೆ. ಈ ಭಾಗದಲ್ಲಿ ದಿನದ 24 ತಾಸು ಮೋಟಾರು ವಾಹನ ಇಲಾಖೆಯ 20 ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಲಿದೆ. ವಾಹನಗಳಿಗೆ ಸಂಬಂಧಿಸಿ ಹಲವು ಉಚಿತ ನೆರವುಗಳು ಈ ಸೇಫ್ ಝೋನ್ ವಲಯದಲ್ಲಿ ಲಭ್ಯವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!