Monday, December 1, 2025

ಒಟಿಟಿಗೆ ಬರಲಿದೆ ನಟಿ ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್‌ಫ್ರೆಂಡ್‌, ಎಲ್ಲಿ ರಿಲೀಸ್‌ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್‌ ಅಭಿನಯದ ದಿ ಗರ್ಲ್‌ಫ್ರೆಂಡ್‌ ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿಸಿದೆ. ಜನರು ಸಿನಿಮಾವನ್ನು ಇಷ್ಟಪಟ್ಟಿದ್ದು, ಇದೀಗ ಒಟಿಟಿ ಆಡಿಯನ್ಸ್‌ ರಂಜಿಸಲು ಸಿನಿಮಾ ನಿಮ್ಮ ಮನೆಯ ಪರದೆ ಮೇಲೇ ಬರಲಿದೆ.

ನಿರ್ದೇಶಕ ರಾಹುಲ್ ರವೀಂದ್ರನ್ ಈ ಮಹಿಳಾ ಪ್ರಧಾನ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದೀಕ್ಷಿತ್ ಶೆಟ್ಟಿ ರಶ್ಮಿಕಾ ಅವರ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಈಗ ಒಟಿಟಿಗೆ ಬರಲು ರೆಡಿ ಆಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

ನವೆಂಬರ್ 07 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ದಿ ಗರ್ಲ್‌ಫ್ರೆಂಡ್’ ಚಿತ್ರ ಸೂಪರ್ ಹಿಟ್ ಆಯಿತು. ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿತು. ಸೀಮಿತ ಬಜೆಟ್‌ನಲ್ಲಿ ನಿರ್ಮಿಸಲಾದ ಇದು ರೂ. 28 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಟಾಕ್ಸಿಕ್ ಬಾಯ್​ಫ್ರೆಂಡ್ ಹೊಂದಿದ್ದರೆ ಹುಡುಗಿಯರು ವೈಯಕ್ತಿಕ ಜೀವನದಲ್ಲಿ ಮತ್ತು ವೃತ್ತಿಪರವಾಗಿ ಹೇಗೆ ತೊಂದರೆಗೊಳಗಾಗುತ್ತಾರೆ ಎಂಬುದನ್ನು ನಿರ್ದೇಶಕ ರಾಹುಲ್ ರವೀಂದ್ರನ್ ಈ ಚಿತ್ರದಲ್ಲಿ ತೋರಿಸಿದ್ದಾರೆ. ‘ದಿ ಗರ್ಲ್‌ಫ್ರೆಂಡ್’ ಚಿತ್ರವನ್ನು ಅನೇಕರಿಗೆ ಇಷ್ಟ ಆಗಿದ್ದು ಇದೇ ಕಾರಣಕ್ಕೆ.

ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗಿದ್ದ ‘ದಿ ಗರ್ಲ್‌ಫ್ರೆಂಡ್’ ಚಿತ್ರ ಈಗ ಒಟಿಟಿಗೆ ಬರುತ್ತಿದೆ. ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ರಮುಖ ಒಟಿಟಿ ಕಂಪನಿ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ರಶ್ಮಿಕಾ ಅವರ ಸಿನಿಮಾದ ಸ್ಟ್ರೀಮಿಂಗ್ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ.

ಡಿಸೆಂಬರ್ 05 ರಿಂದ ‘ದಿ ಗರ್ಲ್‌ಫ್ರೆಂಡ್’ ಚಿತ್ರವನ್ನು ಒಟಿಟಿ ಸ್ಟ್ರೀಮಿಂಗ್‌ಗೆ ತರಲಾಗುವುದು ಎಂದು ನೆಟ್‌ಫ್ಲಿಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ. ತೆಲುಗು ಜೊತೆಗೆ, ಈ ಚಿತ್ರ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುತ್ತದೆ. ಥಿಯೇಟರ್ ಅಲ್ಲಿ ಬಿಡುಗಡೆ ಆಗಿ ಒಂದು ತಿಂಗಳು ಮೊದಲೇ ‘ದಿ ಗರ್ಲ್‌ಫ್ರೆಂಡ್’ ಒಟಿಟಿಗೆ ಬರುತ್ತಿರುವುದು ವಿಶೇಷವಾಗಿದೆ.

error: Content is protected !!