ಕಲ್ಲಿದ್ದಲು ಲೆವಿ ಹಗರಣ: ಸಿಎಂ ಕಚೇರಿಯ IAS ಅಧಿಕಾರಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿ ಛತ್ತೀಸ್‌ಗಢ ಸಿಎಂಒ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ ಅವರನ್ನು ಇಡಿ ಬಂಧಿಸಿದೆ.
ಕಳೆದೆರಡು ವರ್ಷಗಳಿಂದ ತನಿಖೆ ನಡೆಸುತ್ತಿರುವ ಇಡಿ , ಅಕ್ರಮ ಕಲ್ಲಿದ್ದಲು ಲೆವಿ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ಕಚೇರಿ ಪ್ರಮುಖ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ ಅವರನ್ನು ಬಂಧಿಸಿದೆ.
ರಾಜ್ಯ ಆಡಳಿತ ಸೇವಾ ಅಧಿಕಾರಿ ಸೌಮ್ಯಾ ಅವರು ಡಿಸೆಂಬರ್ 2008 ರಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಿಎಂಒದಲ್ಲಿ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಅಕ್ರಮ ಕಲ್ಲಿದ್ದಲು ಲೆವಿ ಹಗರಣದ ಕಿಂಗ್‌ಪಿನ್ ಎಂದು ಇಡಿ ಬಣ್ಣಿಸಿರುವ ಸೂರ್ಯಕಾಂತ್ ತಿವಾರಿ ಸೇರಿದಂತೆ 2009 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್, ಮೂವರು ಉದ್ಯಮಿಗಳನ್ನು ಇಡಿ ಈಗಾಗಲೇ ಬಂಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!