ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಾದ್ಯಂತ ಎಲ್ಲಾ ದೇಗುಲಗಳಲ್ಲಿಯೂ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ. ಮೊಬೈಲ್ ಫೋನ್ ಬಳಕೆ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಪ್ರಕಟಿಸಿದೆ. ದೇವಾಲಯಗಳ ಪಾವಿತ್ರ್ಯತೆ ಹಾಗೂ ಪರಿಸರ ಕಾಪಾಡುವ ನಿಟ್ಟಿನಲ್ಲಿ ಈ ಆದೇಶ ಪ್ರಕಟವಾಗಿವೆ.
ಸಾಕಷ್ಟು ದೇವಾಲಯಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ಎನ್ನುವ ಬೋರ್ಡ್ಗಳನ್ನು ಹಾಕಲಾಗಿತ್ತು. ಆದರೆ ಅದಾಗ್ಯೂ ಹಲವರ ಫೋನ್ಗಳು ಪೂಜೆ ವೇಳೆ ರಿಂಗಣಿಸಿ ಇತರರಿಗೆ ಕಿರಿಕಿರಿಯುಂಟು ಮಾಡಿತ್ತು.
ಮೊಬೈಲ್ ನಿಷೇಧದಿಂದ ಜನತೆಗೆ ಸಮಸ್ಯೆಯಾಗದಿರಲಿ ಎಂದು ಕ್ರಮ ವಹಿಸಲು ಎಲ್ಲಾ ದೇವಾಲಯಗಳಲ್ಲಿ ಲಾಕರ್ ವ್ಯವಸ್ಥೆ ಮಾಡಲು ಕೋರ್ಟ್ ಸೂಚಿಸಿದೆ. ಈ ಆದೇಶ ಜಾರಿಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ಕೋರ್ಟ್ ಆದೇಶದಲ್ಲಿ ತಿಳಿಸಿದೆ.