ಪುನೀತ್ ಅಭಿಮಾನಿ ಮಗುವಿಗೆ ಹೆಸರಿಟ್ರು ಶಿವರಾಜ್‌ಕುಮಾರ್, ಏನು ಹೆಸರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಶಿವರಾಜ್‌ಕುಮಾರ್ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಯರ ದರ್ಶನ ಪಡೆದಿದ್ದಾರೆ.
ಈ ವೇಳೆ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬರು ಮಗುವಿನ ಜೊತೆ ಬಂದಿದ್ದು, ಮಗುವಿಗೆ ಹೆಸರಿಡಲು ಮನವಿ ಮಾಡಿದ್ದಾರೆ.

ಪುನೀತ್ ಅಪ್ಪಟ ಅಭಿಮಾನಿಯಾದ ತಿಮ್ಮಾರೆಡ್ಡಿ- ಶಾಂತಿ ದಂಪತಿಯ ಮಗುವಿಗೆ ಶಿವರಾಜ್‌ಕುಮಾರ್ ಅಪ್ಪು ಎಂದು ಹೆಸರಿಟ್ಟಿದ್ದಾರೆ. ಅಪ್ಪು ಹೆಸರು ಕೇಳಿ ದಂಪತಿ ಖುಷಿಯಾಗಿದ್ದು, ಮಗುವಿಗೆ ಇದೇ ಹೆಸರಲ್ಲಿ ಕರೆಯುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!