ಇದೇ ಮೊದಲ ಬಾರಿಗೆ ಅಗ್ನಿವೀರ್ ಯೋಜನೆಯಡಿ 341 ಮಹಿಳಾ ನಾವಿಕರು ನೌಕಾಪಡೆಗೆ ಸೇರ್ಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ ಅಗ್ನಿವೀರ್ ಯೋಜನೆಯಡಿ ಇದೇ ಮೊದಲ ಬಾರಿಗೆ 341 ಮಹಿಳಾ ನಾವಿಕರು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ಸುಮಾರು 3,000 ಅಗ್ನಿವೀರ್‌ಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಅವರಲ್ಲಿ 341 ಮಹಿಳೆಯರು ಇದ್ದಾರೆ. 10 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿದಾರರ ಪೈಕಿ 82,000 ಮಹಿಳೆಯರಿದ್ದರು ಎಂದು ಅವರು ಹೇಳಿದ್ದಾರೆ.

ಇಲ್ಲಿ ಮಹಿಳೆಯರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಅರ್ಹತೆ ಪಡೆಯಲು ಪುರುಷರು ಮತ್ತು ಮಹಿಳೆಯರು ಇಬ್ಬರೂ ಒಂದೇ ರೀತಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ನೌಕಾಪಡೆಯ ಮುಖ್ಯಸ್ಥರು ದೃಢಪಡಿಸಿದ್ದಾರೆ.

2047ರ ವೇಳೆಗೆಭಾರತೀಯ ನೌಕಾಪಡೆಯು ‘ಆತ್ಮನಿರ್ಭರ್’ ಆಗಲಿದೆ ಎಂದು ಸರ್ಕಾರಕ್ಕೆ ಭರವಸೆ ನೀಡಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ವಿವಿಧ ಮಿಲಿಟರಿ ಮತ್ತು ಸಂಶೋಧನಾ ಹಡಗುಗಳ ಚಲನವಲನಗಳ ಮೇಲೆ ನೌಕಾಪಡೆಯು ಬಲವಾದ ನಿಗಾ ಇರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!