ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖಗೆ೯ ಬಲಗೈ ಬಂಟ ಕಪನೂರ್ ಬಂಧನ

ಹೊಸದಿಗಂತ ವರದಿ, ಕಲಬುರಗಿ:

ಶಾಸಕ ಪ್ರಿಯಾಂಕ್ ಖಗೆ೯ ಬಲಗೈ ಬಂಟ ಮಹಾನಗರ ಪಾಲಿಕೆ ಸದಸ್ಯ ರಾಜು ಕಪನೂರ್ ಅವರನ್ನು ಯಡ್ರಾಮಿ ಪೋಲಿಸರು ವಿದೇಶಿ ಕಂಟ್ರಿಮೆಡ್ ಪಿಸ್ತೂಲ ಖರೀದಿ ಆರೋಪದ ಮೇಲೆ ಶನಿವಾರ ಬಂಧನ ಮಾಡಿದ್ದಾರೆ.

ಯಡ್ರಾಮಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಗುರುಲಿಂಗಪ್ಪಾ ಎಂಬಾತನಿಂದ ರಾಜು ಕಪನೂರ್ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಕಂಟ್ರಿಮೆಡ್ ಪಿಸ್ತೂಲ, ಮತ್ತು 30 ಜೀವಂತ ಗುಂಡುಗಳು ಖರೀದಿ ಮಾಡಿದ್ದನು ಎನ್ನಲಾಗಿದೆ. ಈ ಕುರಿತು ಗುರುಲಿಂಗಪ್ಪಾ ಪೋಲಿಸರ ಮುಂದೆ ನೀಡಿದ್ದ ವಿಡಿಯೋ ಹೇಳಿಕೆಯಲ್ಲಿ ಕಪನೂರ್ ಹೆಸರು ಉಲ್ಲೇಖಿಸಿದ್ದ. ಇದರಿಂದ ಪೋಲಿಸರು ರಾಜು ಕಪನೂರ್, ಗೆ ಎರಡು ಬಾರಿ ನೋಟಿಸ್ ನೀಡಿದ್ದರು. ಆದರೆ ನೋಟಿಸ್, ಗೆ ಕ್ಯಾರೇ ಎನ್ನದ ರಾಜು ಕಪನೂರ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.

ನನ್ನನ್ನು ಕೊಲೆ ಮಾಡಲು ರಾಜು ಕಪನೂರ್ ಗನ್ ಖರೀದಿ ಮಾಡಿದ್ದ ಎಂದು ಶುಕ್ರವಾರ ಬಿಜೆಪಿ ಮುಖಂಡ,ಉದ್ಯಮಿ ಮಣಿಕಂಠ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ಇದೀಗ ವಿಡಿಯೋ ರಿಲೀಸ್ ಆದ ಬಳಿಕ ರಾಜು ಕಪನೂರ್ ಅವರನ್ನು ಪೋಲಿಸ್ ಅರೆಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!