ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆಯ ಓಟ ನಿರಂತರವಾಗಿ ಮುಂದುವರಿದಿದೆ. ಇಂದು, ಲೋಹಗಳ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಗಮನಾರ್ಹ ಜಿಗಿತ ದಾಖಲಾಗಿದೆ.
24 ಕ್ಯಾರಟ್‌ನ ಚಿನ್ನದ ಬೆಲೆ ಇದೀಗ 1,30,000 ರೂ. ಗಡಿ ದಾಟಿದೆ. ಪ್ರಸ್ತುತ, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,30,480 ತಲುಪಿದೆ. ಇನ್ನು, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರಟ್ ಚಿನ್ನದ ಬೆಲೆ ಕೂಡ 1,20,000 ಗಡಿಯ ಸಮೀಪಕ್ಕೆ ಬಂದಿದ್ದು, ಪ್ರಸ್ತುತ 10 ಗ್ರಾಂ ಬೆಲೆ 1,19,600 ಆಗಿದೆ. ಚೆನ್ನೈನಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಆಭರಣ ಚಿನ್ನವು ಈಗಾಗಲೇ 12,000 ಗಡಿಯನ್ನು ದಾಟಿದೆ. ಇಂದು ಗ್ರಾಂ ಚಿನ್ನದ ಬೆಲೆ 60 ಹೆಚ್ಚಳ ಕಂಡಿದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಕಡೆ ಬೆಲೆಗಳು ಯಥಾಸ್ಥಿತಿಯಲ್ಲಿವೆ ಎಂದು ವರದಿಯಾಗಿದೆ.
ಚಿನ್ನದ ಜೊತೆಜೊತೆಗೆ ಬೆಳ್ಳಿ ಬೆಲೆಯ ಭರ್ಜರಿ ಏರಿಕೆಯ ಓಟವೂ ಮುಂದುವರಿದಿದೆ. ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ 3 ಏರಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ, ಪ್ರತಿ ಗ್ರಾಂ ಬೆಳ್ಳಿ ಬೆಲೆ 185 ರಿಂದ 188 ಕ್ಕೆ ತಲುಪಿದೆ. 100 ಗ್ರಾಂ ಬೆಳ್ಳಿಯ ಬೆಲೆ ಇದೀಗ 18,800 ಆಗಿದೆ. ಚೆನ್ನೈ ಸೇರಿದಂತೆ ಹಲವು ಕಡೆಗಳಲ್ಲಿ ಬೆಳ್ಳಿ ಬೆಲೆ 4 ರಷ್ಟು ಏರಿಕೆ ಕಂಡಿದ್ದು, ತಮಿಳುನಾಡು, ಕೇರಳ ಮೊದಲಾದ ಕೆಲವು ರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿ ಬೆಲೆ 19,600 ತಲುಪಿದೆ.

