ಟ್ವಿಟ್ಟರ್‌ ಒಡೆಯ ಎಲಾನ್‌ ಮಸ್ಕ್‌ ಆತ್ಮಹತ್ಯೆ ಮಾಡುವ ಆಲೋಚನೆಯಲಿದ್ದಾರಾ?: ಈ ಕುರಿತು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಟ್ವಿಟ್ಟರ್‌ ಒಡೆಯ ಎಲಾನ್‌ ಮಸ್ಕ್‌ ಸದಾ ವಿವಿಧ ಕಾರಣಗಳಿಂದ ಸುದ್ದಿಯಲ್ಲಿದ್ದು, ಇದೀಗ ಅವರ ಮಾನಸಿಕ ಆರೋಗ್ಯ ಹಾಗೂ ಇತರೆ ವಿಚಾರಗಳಲ್ಲೂ ಮೇಲೆ ಹಲವರು ನಾನಾ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಜನರ ಈ ಊಹಾಪೋಹಗಳಿಗೆ ಹಾಗೂ ತನ್ನ ಮಾನಸಿಕ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ತನ್ನ ಮಾನಸಿಕ ಆರೋಗ್ಯ ಹಾಗೂ ಸುರಕ್ಷತೆ ಕುರಿತು ಜನರು ಕಳವಳ ವ್ಯಕ್ತಪಡಿಸುತ್ತಿದ್ದರೂ ತನ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಸ್ಪೇಸ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್ಟರ್‌ ಸ್ಪೇಸ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಕೇಳುಗರನ್ನು ಹೊಂದಿದ್ದ ವೇಳೆ, ನೀವು ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಹೊಂದಿದ್ದೀರಾ ಅಥವಾ ಪ್ರವೃತ್ತಿ ಹೊಂದಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಎಲಾನ್‌ ಮಸ್ಕ್, ನನಗೆ ಯಾವುದೇ ಆತ್ಮಹತ್ಯೆಯ ಆಲೋಚನೆಗಳಿಲ್ಲ. ನಾನು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದು ನಿಜವಲ್ಲ ಎಂದು ಉತ್ತರಿಸಿದ್ದಾರೆ.

ಟ್ವಿಟ್ಟರ್‌ ಸ್ಪೇಸ್‌ನಲ್ಲಿ ಲೈವ್ ಪ್ರಶ್ನೋತ್ತರದ ಸಮಯದಲ್ಲಿ, ಸೆನ್ಸಾರ್‌ಶಿಪ್‌ ವಿಚಾರಕ್ಕೆ ಬಂದಾಗ ರಿಪಬ್ಲಿಕನ್ನರಿಗಿಂತ ಟ್ವಿಟ್ಟರ್‌ ಡೆಮೋಕ್ರಾಟ್‌ಗಳಿಗೆ ಒಲವು ತೋರುತ್ತದೆ ಎಂದು ಎಲಾನ್‌ ಮಸ್ಕ್ ಸೂಚಿಸಿದ್ದರು. ಇದು ಖಂಡಿತವಾಗಿಯೂ ವಾಸ್ತವ ಸಂಗತಿಯಾಗದಿರಬಹುದು. ಆದರೂ, ಟ್ವಿಟ್ಟರ್‌ನಲ್ಲಿ ಡೆಮೋಕ್ರಾಟ್‌ಗಳು ಮತ್ತು ಲೆಫ್ಟಿಸ್ಟ್‌ಗಳನ್ನು ಸೆನ್ಸಾರ್‌ ಮಾಡದಿದ್ದರೂ, ರಿಪಬ್ಲಿಕನ್ ಮತ್ತು ರೈಟಿಸ್ಟ್‌ಗಳನ್ನು ಸೆನ್ಸಾರ್‌ ಮಾಡುವ ಸಮಯವಿತ್ತು ಎಂದು ಹೇಳಿದ್ದಾರೆ.

ಇನ್ನು, ಎಲಾನ್‌ ಮಸ್ಕ್‌, ಈ ಹಿಂದೆಯೂ ತಾನು ನಿಗೂಢ ಸನ್ನಿವೇಶಗಳಿಂದ ಸಾಯುವ ಕುರಿತು ಸಹ ಮಾತನಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!