ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ನಂತರ ಎಲ್ಲ ಹುಡುಗಿಯರು ದಪ್ಪ ಆಗುತ್ತಾರೆ. ಇದಕ್ಕೆ ಸೆಲೆಬ್ರಿಟಿಗಳು ಹೊರತೇನಲ್ಲ, ದಪ್ಪ ಆದ ನಂತರ ಮತ್ತೆ ಕಷ್ಟಪಟ್ಟು ಸಣ್ಣ ಆಗಿಬಿಡುತ್ತಾರೆ.
ಆದರೆ ಈ ಬಾಲಿವುಡ್ ನಟಿ ಮದುವೆಯಾದ ಎರಡೇ ತಿಂಗಳಿಗೆ ಎಂಟು ಕೆಜಿ ತೂಕ ಹೆಚ್ಚು ಮಾಡಿಕೊಂಡಿದ್ರಂತೆ. ಇವರು ಬೇರ‍್ಯಾರು ಅಲ್ಲ ಕಾಜಲ್ ದೇವಗನ್. ಹೌದು ಅಜಯ್ ದೇವಗನ್ ಅವರನ್ನು ಮದುವೆಯಾದ ನಂತರ ಅವರ ತಂದೆ ತಾಯಿ ಜೊತೆ ಎರಡು ತಿಂಗಳು ಕಾಜಲ್ ಇದ್ದರಂತೆ.
ಪ್ರತಿದಿನ ಡೈನಿಂಗ್ ಟೇಬಲ್ ಮೇಲೆ ತರತರದ ಪರಾಟಾ, ಬೆಣ್ಣೆ ಇದ್ದೇ ಇರುತ್ತಿತ್ತಂತೆ. ಪ್ರೀತಿಯಿಂದ ಪರಾಟ ತಿನ್ನಿಸಿ ತಿನ್ನಿಸಿ ಅತಿವೇಗದಲ್ಲಿ ತೂಕ ಹೆಚ್ಚಾಗಿತ್ತಂತೆ!