ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿ ಸುಂಕ ವಿಧಿಸುವ ಹಾಗೂ ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಸೆಸ್ ಅನ್ನು ವಿಧಿಸುವ 2 ಮಸೂದೆಗಳನ್ನು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಮತ್ತಷ್ಟು ದುಬಾರಿಯಾಗಲಿವೆ.
ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ – 2025 ಮತ್ತು ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ – 2025 ಅನ್ನು ಮಂಡಿಸಲಾಗಿದೆ. ಮಸೂದೆ ಕಾಯ್ದೆಯಾದರೆ ಎಲ್ಲಾ ತಂಬಾಕು ಉತ್ಪನ್ನಗಳಾದ ಸಿಗರೇಟ್, ಜಗಿಯುವ ತಂಬಾಕು, ಸಿಗಾರ್, ಹುಕ್ಕಾ, ಜರ್ದಾ ಮತ್ತು ಪರಿಮಳಯುಕ್ತ ತಂಬಾಕಿನ ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ.
ಏನು ಬದಲಾವಣೆ?
ಜಿಎಸ್‌ಟಿ (GST) ಪರಿಹಾರದ ಸೆಸ್ ಕೊನೆಗೊಂಡ ನಂತರ ತೆರಿಗೆಯನ್ನು ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಕೇಂದ್ರ ಅಬಕಾರಿ ಸುಂಕದ ದರವನ್ನು ಹೆಚ್ಚಿಸಲು ಸರ್ಕಾರಕ್ಕೆ ಹಣಕಾಸಿನ ಅವಕಾಶವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಬದಲಾಗಿ ಕೇಂದ್ರೀಯ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಇದರಿಂದ ಸರಕ್ಕೆ ತಂಬಾಕು ಉತ್ಪನ್ನಗಳ ಮೇಲಿನ ಸುಂಕದ ದರಗಳನ್ನು ಸುಲಭವಾಗಿ ಹೆಚ್ಚಿಸುವ ಅವಕಾಶ ಕೇಂದ್ರಕ್ಕೆ ಸಿಗುತ್ತದೆ.
ಜಿಎಸ್‌ಟಿ ಸೆಸ್‌ಗೆ ಬದಲಾಗಿ ಹೊಸ ‘ಆರೋಗ್ಯ ಭದ್ರತೆ-ರಾಷ್ಟ್ರೀಯ ಭದ್ರತಾ ಸೆಸ್’ ವಿಧಿಸಲಾಗುತ್ತದೆ. ಈ ಸೆಸ್‌ನ ರಚನೆ ವಿಭಿನ್ನವಾಗಿರುತ್ತದೆ, ಇದರಿಂದ ಬಂದ ಹಣವು ಆರೋಗ್ಯ ಸೇವೆಗಳು, (ಕ್ಯಾನ್ಸರ್ ನಿಯಂತ್ರಣ) ಮತ್ತು ರಾಷ್ಟ್ರೀಯ ಭದ್ರತಾ (ಸೇನಾ ಸಬ್ಸಿಡಿ)ಗೆ ನೇರವಾಗಿ ಬಳಸಲ್ಪಡುತ್ತದೆ. ತಂಬಾಕು ಮತ್ತು ಪಾನ್ ಮಸಾಲಾ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದರ ಹೆಚ್ಚಿಸಲಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು (ಉದಾ: ದವಡೆ, ಕ್ಯಾನ್ಸರ್) ಕಡಿಮೆಯಾಗಬಹುದು ಎಂಬ ಲೆಕ್ಕಾಚಾರವನ್ನು ಸರ್ಕಾರ ಹಾಕಿಕೊಂಡಿದೆ.
ಜೆಎಸ್‌ಟಿ ಪರಿಷ್ಕರಣೆಯ ಬಳಿಕ ಜೀವಕ್ಕೆ ಹಾನಿಯುಂಟು ಮಾಡುವ ತಂಬಾಕು ಉತ್ಪನ್ನಗಳ ಮೇಲೆ 40% ತೆರಿಗೆ ವಿಧಿಸಲಾಗುತ್ತಿದೆ. ಹೈಎಂಡ್ ವಿಲಾಸಿ ಕಾರುಗಳು, ತಂಬಾಕು ಹಾಗೂ ಸಿಗರೇಟ್‌ಗಳು ಸೇರಿ ಇನ್ನೂ ಕೆಲವು ವಸ್ತುಗಳ ಮೇಲೆ ವಸ್ತುಗಳ ಮೇಲೆ 40% ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ಅನುಮೋದಿಸಿತ್ತು.

