ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಿತ್ವಾ ಚಂಡಮಾರುತದ ಶ್ರೀಲಂಕಾ ಅಕ್ಷರಶ ತತ್ತರಿಸಿದ್ದು, ಅಲ್ಲಿ ಸಿಲುಕಿಕೊಂಡಿರುವ 2,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಭಾರತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಶೋಧ ಮತ್ತು ರಕ್ಷಣಾ ತಂಡಗಳು ಮತ್ತು ಮಿಲಿಟರಿ ಹೆಲಿಕಾಪ್ಟರ್ಗಳು ಪ್ರವಾಹ ಪೀಡಿತ ಪ್ರದೇಶಗಳಿಂದ 150 ಕ್ಕೂ ಹೆಚ್ಚು ಭಾರತೀಯ ಜನರನ್ನು ರಕ್ಷಿಸಿವೆ.
ಶ್ರೀಲಂಕಾ ಎರಡು ದಶಕಗಳಲ್ಲಿಯೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಿದೆ. ದಿತ್ವಾ ಚಂಡಮಾರುತವು ದ್ವೀಪದಾದ್ಯಂತ ಪ್ರವಾಹ ಮತ್ತು ಭೂಕುಸಿತಗಳನ್ನು ಉಂಟುಮಾಡಿದ ನಂತರ ಸುಮಾರು ಒಂದು ಮಿಲಿಯನ್ ಜನರು ( ಅಂದರೇ, 10 ಲಕ್ಷ ಜನರು) ಬಾಧಿತರಾಗಿದ್ದಾರೆ . 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾಕ್ಕೆ ತುರ್ತು ನೆರವು ನೀಡಲು ಭಾರತ ನವೆಂಬರ್ 28 ರಂದು ಆಪರೇಷನ್ ಸಾಗರ್ ಬಂಧುವನ್ನು ಪ್ರಾರಂಭಿಸಿತು.
ಕಳೆದ ವಾರದಿಂದ ಶ್ರೀಲಂಕಾದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತೀಯ ವಾಯುಪಡೆ (ಐಎಎಫ್) ವಿಶೇಷ ವಿಮಾನಗಳ ಹಾರಾಟ ನಡೆಸಿದೆ. ಐಎಎಫ್ ವಿಮಾನಗಳು ಮತ್ತು ವಾಣಿಜ್ಯ ವಿಮಾನಗಳು 2,000 ಕ್ಕೂ ಹೆಚ್ಚು ನಾಗರಿಕರನ್ನು ಮರಳಿ ಕರೆತಂದಿವೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

