ಹೊಸದಿಗಂತ ವರದಿ, ಅಂಕೋಲಾ:
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಗಿಲಿಗೆ ಹಾಕಿದ ಬೀಗ ಮುರಿದು ಕಪಾಟು ಒಡೆದು ಸುಮಾರು ಬೆಳ್ಳಿಯ ಆಭರಣ ಮತ್ತು ನುಗ್ಗಿ ಹಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಬಳಲೆ ಮಾದನಗೇರಿಯಲ್ಲಿ ನಡೆದಿದೆ.
ಬಳಲೆ ನಿವಾಸಿ ಹರಿಶ್ಚಂದ್ರ ಗಣಪತಿ ಭಂಡಾರಿ ಎನ್ನುವವರ ಮನೆಯಲ್ಲಿ ಡಿಸೆಂಬರ್ 7 ರ ಬೆಳಗ್ಗೆ 6.30 ರಿಂದ ಡಿಸೆಂಬರ್ 8 ರ ಸಂಜೆ 5.30 ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆಸಲಾಗಿದ್ದು 2 ಸಾವಿರ ರೂಪಾಯಿ ಮೌಲ್ಯದ 1 ಜೊತೆ ಬೆಳ್ಳಿ ಗೆಜ್ಜೆ, 1ಸಾವಿರ ಬೆಲೆಯ ಬೆಳ್ಳಿಯ ಡಾಬು,500 ರೂಪಾಯಿ ಬೆಲೆಯ ಬೆಳ್ಳಿ ವಾಂಕು, 400 ರೂಪಾಯಿ ಬೆಲೆಯ ಪಂಚಲೋಹದ ವಾಂಕು,
20 ಸಾವಿರ ಮೌಲ್ಯದ ಬಂಗಾರದ ಕರಿಮಣಿ ಸರ ಮತ್ತು 6 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು ಸುಮಾರು 30,400 ಬೆಲೆಯ ಸ್ವತ್ತುಗಳನ್ನು ಕಳ್ಳತನ ನಡೆಸಲಾಗಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ಮನೆ ಮಾಲಿಕ ದೂರು ದಾಖಲಿಸಿದ್ದಾರೆ.
ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.