ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದೇ ಒಂದು ಫೋಟೋ ಚಿತ್ರರಸಿಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದ ಯುವ ನಟಿ ಧನ್ಯಾ ರಾಮ್‌ಕುಮಾರ್ ಮತ್ತು ಬಾಲಿವುಡ್ ನಟ ಆರ್ಯನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿರುವ ಈ ಚಿತ್ರ ಇದೀಗ ವೈರಲ್ ಆಗಿದ್ದು, ಇವರಿಬ್ಬರ ಭೇಟಿ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಕನ್ನಡ ಸಿನಿಮಾಗಳಲ್ಲೇ ತಮ್ಮದೇ ಗುರುತು ಮೂಡಿಸಿಕೊಂಡಿರುವ ಧನ್ಯಾ ರಾಮ್‌ಕುಮಾರ್ ಹಾಗೂ ಬಾಲಿವುಡ್‌ನಿಂದಲೇ ದೂರ ಉಳಿದಿರುವ ಆರ್ಯನ್ ಖಾನ್ ನಡುವಿನ ಈ ಅನಿರೀಕ್ಷಿತ ಭೇಟಿಯೇ ಜನರ ಕುತೂಹಲಕ್ಕೆ ಕಾರಣವಾಗಿದೆ.
ನಿಜವಾಗಿ ಆರ್ಯನ್ ಖಾನ್ ಇತ್ತೀಚೆಗೆ ಬೆಂಗಳೂರಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದರು. ಇದೇ ವೇಳೆ ಧನ್ಯಾ ರಾಮ್‌ಕುಮಾರ್ ಅವರೊಂದಿಗೆ ಸಹಜ ಭೇಟಿಯಾಗಿದ್ದು, ಸೌಹಾರ್ದಪೂರ್ಣವಾಗಿ ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ಹರಿದುಬಂದಿವೆ. ಕೆಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ಹೊಸ ಸಿನಿ ಸಂಪರ್ಕಗಳ ಬಗ್ಗೆ ಊಹಾಪೋಹಗಳನ್ನು ಹರಡುತ್ತಿದ್ದಾರೆ.

