ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್:‌ 100 ಜನರೊಂದಿಗೆ ಬಂದು ಯುವತಿಯ ಅಪಹರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಂಗಾ ರೆಡ್ಡಿ ಜಿಲ್ಲೆಯ ತುರ್ಕಯಾಂಜಲ್ ಪುರಸಭೆ ವ್ಯಾಪ್ತಿಯ ಆದಿಭಟ್ ನಲ್ಲಿ ಯುವತಿಯೊಬ್ಬಳ ಅಪಹರಣ ಸಂಚಲನ ಮೂಡಿಸಿದೆ. ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟ ಕಿಡ್ನಾಪ್ ಗ್ಯಾಂಗ್, 100 ಮಂದಿ ಒಮ್ಮೆ ಯುವತಿಯ ಮನೆಗೆ ದಾಳಿ ಮಾಡಿ ಆಕೆಯನ್ನು ಅಪಹರಿಸಿದ್ದಾರೆ. ಯುವತಿಯನ್ನು ಅಪಹರಿಸುವಾಗ ತಡೆದ ಪೋಷಕರನ್ನು ಅಪಹರಣಕಾರರು ಥಳಿಸಿ ಯುವತಿಯನ್ನು ಎಳೆದೊಯ್ದಿದ್ದಾರೆ. ಯುವತಿ ಪೋಷಕರು ಜೋರಾಗಿ ಕೂಗಿಕೊಂಡಿದ್ದರಿಂದ ನೆರೆಹೊರೆಯವರು ಬಂದು ತಡೆಯಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಸಿನಿಮಾ ಶೈಲಿಯಲ್ಲೇ ನಡೆದಿರುವ ಈ ಕಿಡ್ನಾಪ್ ಘಟನೆ ಸ್ಥಳದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಯುವತಿಯ ಮನೆಯನ್ನು ಕಿಡ್ನಾಪ್ ಗ್ಯಾಂಗ್ ಧ್ವಂಸ ಮಾಡಿದೆ. ಸಿಕ್ಕ ವಸ್ತುಗಳು ನಾಶವಾಗಿವೆ. ಕಾರುಗಳನ್ನೂ ಧ್ವಂಸಗೊಳಿಸಲಾಗಿದೆ.ಈ ಅಪಹರಣದ ಹಿಂದೆ ಪ್ರೇಮ ಪ್ರಕರಣವಿತ್ತು ಎಂದು ಹೇಳಲಾಗಿದೆ.

ಈ ಅಪಹರಣದ ಕುರಿತು ಯುವತಿಯ ಪೋಷಕರ ದೂರಿನ ಮೇರೆಗೆ ಎಸಿಪಿ ಉಮಾಮಹೇಶ್ವರ ರಾವ್ ಸ್ಥಳಕ್ಕಾಗಮಿಸಿದ್ದರು. ಯುವತಿಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ಮಿಸ್ಟರ್ ಟಿ ಟೈಮ್ ಮಾಲೀಕ ನವೀನ್ ರೆಡ್ಡಿಯೇ ಆಕೆಯನ್ನು ಕಿಡ್ನಾಪ್ ಮಾಡಿದ್ದು ಎಂದು ಯುವತಿಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ನವೀನ್ ರೆಡ್ಡಿ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದೇ ವೇಳೆ ಅಪಹರಣಕ್ಕೊಳಗಾದ ಯುವತಿ ಮುಚ್ಚರ್ಲಾ ವೈಶಾಲಿ ಡಾಕ್ಟರ್ ಓದುತ್ತಿದ್ದಾಳೆ. ನವೀನ್ ರೆಡ್ಡಿ ವೈಶಾಲಿಯನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದು ತಂದೆ-ತಾಯಿ ವೈಶಾಲಿಗೆ ವಿವಾಹ ನಿಶ್ಚಯಿಸಿದರು. ಅವರ ಮನೆಯಲ್ಲಿ ಮದುವೆ ಕೆಲಸವೂ ಆರಂಭವಾಗಿ ಮದುವೆಗೆ ನೆಂಟರೂ ಬಂದಿದ್ದರಂತೆ. ಹೀಗಿರುವಾಗ ನವೀನ್ ರೆಡ್ಡಿ ಸಿನಿಮಾ ಶೈಲಿಯಲ್ಲಿ ವೈಶಾಲಿಯನ್ನು ಕರೆದೊಯ್ಯಲು 100 ಜನರೊಂದಿಗೆ ಬಂದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಕಿಡ್ನಾಪ್‌ ಮಾಡಿದ್ದಾರೆ.

ವೈಶಾಲಿ ಪತ್ತೆಗಾಗಿ ಎಸಿಪಿ ಉಮಾಮಹೇಶ್ವರ ರಾವ್ ವಿಶೇಷ ತಂಡ ರಚಿಸಿದ್ದಾರೆ. ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸ್ ತಂಡಗಳು ವೈಶಾಲಿಗಾಗಿ ತೀವ್ರ ಶೋಧ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here