Tuesday, December 2, 2025

ಮಧ್ಯಪ್ರದೇಶದಲ್ಲಿ ದುರಸ್ತಿ ಕಾರ್ಯದ ವೇಳೆ ಸೇತುವೆ ಕುಸಿತ, ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯ ಬರೇಲಿ-ಪಿಪರಿಯಾ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆಯೊಂದು ಸುರಸ್ತಿ ಕಾರ್ಯದ ವೇಳೆ ಕುಸಿದುಬಿದ್ದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.

ಹಲವರು ಗಾಯಗೊಂಡಿದ್ದಾರೆ.ನಯಾಗಾಂವ್ ಸೇತುವೆಯ ಬರೇಲಿ ಬದಿಯಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವಾಗ ಒಂದು ಸ್ಪ್ಯಾನ್ ಕುಸಿದಿದೆ. ಎರಡು ಬೈಕ್​​ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಮಾಜಿ ಸಿಆರ್‌ಪಿಎಫ್ ಜವಾನ ದೇವೇಂದ್ರ ಧಕಾಡ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

error: Content is protected !!