ನಮ್ಮಲ್ಲಿ ಬಾಣಂತಿಯರ ಕುರಿತು ಸಾಕಷ್ಟು ನಿರ್ಬಂಧಗಳಿವೆ. ಅವರು ಹೇಗಿರಬೇಕು, ಮಗುವಿನ ಆರೈಕೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ಹಿರಿಯರು ಸಾಕಷ್ಟು ನಿಯಮಗಳನ್ನು ಮಾಡಿದ್ದಾರೆ.
ಒಬ್ಬಂಟಿಯಾಗಿ ಕತ್ತಲ ಕೋಣೆಯಲ್ಲಿ ಆಕೆ ಏಕೆ ಊಟ ಮಾಡಬೇಕು? ಈ ಹಿಂದೆ ಎಲ್ಲರ ಮನೆಯಲ್ಲಿಯೂ ಬಗೆಬಗೆಯ ಖಾದ್ಯದ ಸೌಲಭ್ಯ ಇರಲಿಲ್ಲ. ಆದರೆ ಬಾಣಂತಿಗೆ ಒಳ್ಳೆಯ ಪೋಷಕಾಂಶ ಇರುವ ಆಹಾರ, ಅಂದರೆ ತುಪ್ಪ, ಬೆಣ್ಣೆ, ಹಾಲು ಇವನ್ನೆಲ್ಲಾ ನೀಡಲಾಗುತ್ತಿತ್ತು. ಒಟ್ಟಿಗೆ ಊಟಕ್ಕೆ ಕುಳಿತರೆ ಒಬ್ಬರಿಗೆ ಒಂದು ಊಟ, ಇನ್ನೊಬ್ಬರಿಗೆ ಒಂದು ಊಟ ಎಂದಾಗುತ್ತದೆ. ನಮಗೆ ಬೆಣ್ಣೆ ತುಪ್ಪ ಇಲ್ಲವಾ ಎಂದು ಪ್ರಶ್ನೆಗಳು ಏಳುತ್ತವೆ ಕಣ್ಣು ಬೀಳುತ್ತದೆ ಎಂದು ಅವರನ್ನು ಒಬ್ಬರೇ ಊಟ ಮಾಡಿ ಎನ್ನುತ್ತಾರೆ.
ಆದರೆ ಎಲ್ಲರಿಗೂ ಒಬ್ಬಂಟಿಯಾಗು ಊಟ ಮಾಡುವ ರೂಢಿ ಇರೋದಿಲ್ಲ. ಪ್ರೀತಿಪಾತ್ರರ ಜೊತೆ ತಿಂದರೆ ಸಮಾಧಾನ. ಅಲ್ಲದೇ ಈಗ ಎಲ್ಲರಿಗೂ ಒಂದೇ ಊಟ ಸಿಗುವ ಪರಿಸ್ಥಿತಿಯೂ ಇದೆ. ಒಬ್ಬಂಟಿ ಮಾಡುವುದು ಬಾಣಂತಿಯ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.