24 ಬೌಂಡರಿ, 10 ಸಿಕ್ಸ್..! ಸ್ಫೋಟಕ ದ್ವಿಶತಕ ಸಿಡಿಸಿ ದಾಖಲೆಗಳ ಪುಡಿಗಟ್ಟಿದ ಕಿಶನ್..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಇಶಾನ್ ಕಿಶನ್ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ವಿಶ್ವ ಕ್ರಿಕಟ್‌ ನಲ್ಲಿ ಸಂಚಲನ ಮೂಡಿಸಿದ್ದಾರೆ. ಕೇವಲ 126 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ ಕಿಶನ್‌ ಅತ್ಯಂತ ವೇಗದ ದ್ವಿತಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಯ ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಅವರ ಅಬ್ಬರದ ಇನ್ನಿಂಗ್ಸ್‌ನಲ್ಲಿ 24 ಬೌಂಡರಿಗಳು ಮತ್ತು ಹತ್ತು ಭರ್ಜರಿ ಸಿಕ್ಸರ್‌ಗಳಿದ್ದವು. ಎಡಗೈ ಆಟಗಾರ ಅಂತಿಮವಾಗಿ 131 ಎಸೆತಗಳಲ್ಲಿ 210 ರನ್ ಗಳಿಸಿದರು, ಈ ಸ್ವರೂಪದಲ್ಲಿ ಭಾರತಕ್ಕೆ ಮೂರನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಇಶನ್ ಏಕದಿನದಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದ ಏಳನೇ ಅಂತರಾಷ್ಟ್ರೀಯ ಕ್ರಿಕೆಟಿಗ ಮತ್ತು ನಾಲ್ಕನೇ ಭಾರತೀಯ ಕ್ರಿಕೆಟಿಗ. ಈ ಮೂಲಕ 24 ವರ್ಷದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್‌ ಕಿಶಾನ್‌ ಏಕದಿನದಲ್ಲಿ 200 ರನ್‌ ಮೈಲಿಗಲ್ಲು ತಲುಪಿದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಅವರಂತಹ ಇತರ ಭಾರತೀಯ ದಿಗ್ಗಜರ ಪಟ್ಟಿ ಸೇರಿದ್ದಾರೆ. ಅವರು ಭಾರತದ ಹೊರಗೆ ODI ದ್ವಿಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿದ್ದಾರೆ. ಅವರ ಜಿೊತೆಗೆ ವಿರಾಟ್ ಕೊಹ್ಲಿ ಅವರು ತಮ್ಮ 72 ನೇ ಏಕದಿನ ಶತಕ ಗಳಿಸಿದರು. ಅವರು 91 ಎಸೆತಗಳಲ್ಲಿ 113 ಸಿಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!