ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೃತಯಾತ್ರೆಯ ಸಾಧನಾಗಾಥೆಯಲ್ಲಿ ದೇಶದ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳವಾದ ಕಥೆಯನ್ನು ನೀವು ಈಗಾಗಲೇ ಓದಿದ್ದೀರಿ. ಇದು ಉತ್ಪಾದನೆಯ ಹೆಚ್ಚಳದೊಂದಿಗೆ ಪ್ರತಿ ನಾಗರಿಕನಿಗೂ ಕೊರತೆಯಿಲ್ಲದ ಶಕ್ತಿಯೊದಗಿಸಿ ವಿದ್ಯತ್ತಿನ ತಲಾಬಳಕೆಯಲ್ಲಿ ಹೆಚ್ಚಳವಾಗಿಸಿದ ಬಗೆ ಇಲ್ಲಿದೆ.
ದೇಶವು ಕೊರತೆಯಿಲ್ಲದ ವಿದ್ಯುತ್ ಪೂರೈಕೆ ಹೆಚ್ಚಿಸಿದಷ್ಟು ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ. ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಜತೆ ಜತೆಗೇ ಅವುಗಳನ್ನು ಜನಸಾಮಾನ್ಯರವರೆಗೆ ಸಮರ್ಪಕವಾಗಿ ತಲುಪಿಸಿ ತಲಾಬಳಕೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.
1950ರ ಹೊತ್ತಿಗೆ ವಿದ್ಯುತ್ ತಲಾ ಬಳಕೆಯ ಪ್ರಮಾಣವು 16 ಯುನಿಟ್ ಗಳಷ್ಟಿತ್ತು. ಇದು 2021ರ ಹೊತ್ತಿಗೆ 1208 ಯುನಿಟ್ ಮಟ್ಟವನ್ನು ತಲುಪಿದೆ. ವಿದ್ಯುತ್ ಕೊರತೆಯನ್ನು ನೀಗಿಸಿ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಮತ್ತು ವರ್ಧಿಸಲಾಗಿದೆ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಲಭ್ಯತೆಯಾಗುವಂತೆ ಕ್ರಮ ವಹಿಸಲಾಗಿದೆ. ಆ ಮೂಲಕ ದೇಶದ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಲಾಗಿದೆ.