Tuesday, December 2, 2025

ಕಥೆಯೊಂದ ಹೇಳುವೆ 5 | ಪರ್ಫೆಕ್ಟ್ ಇಲ್ಲಾಂದ್ರೂ ಪರವಾಗಿಲ್ಲ, ಮಾಡೋ ಕೆಲಸ ಸರಿ ಇದ್ರೆ ಸಾಕು! ಏನಂತೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮಮ್ಮ ಯಾವಾಗಲೂ ಎರಡು ಮಡಿಕೆ ಹೊತ್ತುಕೊಂಡು ನೀರು ತರೋಕೆ ಹೋಗ್ತಾರೆ. ಆದ್ರೆ ಅದರಲ್ಲಿ ಒಂದು ಮಡಿಕೆ ತೂತಾಗಿರುತ್ತೆ. ಮನೆ ತಲುಪುವಷ್ಟರಲ್ಲಿ ಆ ತೂತು ಮಡಿಕೆ ಖಾಲಿಯಾಗಿರುತ್ತೆ ಆದ್ರೂ ಅಮ್ಮ ಅದನ್ನೇ ದಿನಾ ತಗೊಂಡು ಹೋಗ್ತಾರೆ ಯಾಕೆ. ಅಂತ ಪುಟ್ಟ ಹುಡುಗ ದಿನಾನೂ ಯೋಚ್ನೆ ಮಾಡ್ತಾನೆ.

ಕಡೆಗೊಮ್ಮೆ ಕೇಳಿಯೇ ಬಿಡುತ್ತಾನೆ ‘ ಅಮ್ಮ ಒಂದು ಮಡಿಕೆ ತೂತಾಗಿದ್ರು ಯಾಕೆ ಅದನ್ನೇ ತಗೊಂಡು ಹೋಗ್ತಿಯ ಕಷ್ಟ ಪಡ್ತೀಯಾ? ಅಂತ ಅದಕ್ಕೆ ಅಮ್ಮ ಹೇಳ್ತಾಳೆ ‘ ಬಾ ನನ್ನ ಜೊತೆ’ ಅಂತ ಅಮ್ಮ ಪುಟ್ಟ ಹುಡುಗನನ್ನು ನದಿ ಹತ್ತಿರ ಕರ್ಕೊಂಡು ಹೋಗಿ ಅಲ್ಲಿ ಒಂದು ಬದಿ ತೋರಿಸ್ತಾಳೆ ಆ ಬದಿ ಬರೀ ಕಲ್ಲು ಮಣ್ಣಿನಿಂದ ತುಂಬಿರುತ್ತೆ, ಮತ್ತೊಂದು ಬದಿ ತೋರಿಸ್ತಾಳೆ ಅಲ್ಲಿ ಸುಂದರವಾದ ಹೂಗಳು ಅರಳಿ ನಿಂತಿರುತ್ತೆ.

ಅಮ್ಮ ಹೇಳ್ತಾಳೆ ‘ ತೂತು ಮಡಿಕೆಯಿಂದ ಬಿದ್ದಿರೋ ನೀರು ಆ ಹೂಗಳು ಎಷ್ಟು ಸುಂದರವಾಗಿ ಕಾಣೋದಕ್ಕೆ ಕಾರಣ ನೋಡು ಅಂತ ಹೇಳ್ತಾಳೆ.

ಈ ಕಥೆಯಿಂದ ನಾವು ಯಾವತ್ತೂ ಪರ್ಫೆಕ್ಟ್ ಆಗಿರಬೇಕು ಅಂತೇನಿಲ್ಲ, ನಮ್ಮ ಸಣ್ಣ ಕೆಲಸ, ಸಣ್ಣ ತಪ್ಪುಗಳು ಯಾವುದು ಕೂಡ ನಮ್ಮ ಬೆಳವಣಿಗೆಗೆ ಅಡ್ಡಿ ಬರೋದಿಲ್ಲ. ನಮ್ಮ ತನವನ್ನು ನಮ್ಮದೇ ರೀತಿಯಲ್ಲಿ ಅನುಭವಿಸಬೇಕು ಏನಂತೀರಾ?

error: Content is protected !!