August 24, 2026
Monday, August 24, 2026
spot_img

HEALTH | ಮಕ್ಕಳಿಗೂ ನಿಮ್ಮ ಫೇವರೆಟ್‌ ನೂಡಲ್ಸ್‌ ಕೊಡ್ತೀರಾ? ಕೊಡೋ ಮುನ್ನ ಇದನ್ನು ಓದಿ

ತಾಯಂದಿರು ಪ್ರೆಗ್ನೆನ್ಸಿಯಲ್ಲಿ ಹೆಚ್ಚು ತಿಂದ ಪದಾರ್ಥಗಳು ಮಕ್ಕಳಿಗೆ ಇಷ್ಟವಾಗುತ್ತದೆ. ನೂಡಲ್ಸ್‌ನ ಟೆಕ್ಸ್ಚರ್‌, ಶೇಪ್‌ ಎಲ್ಲವೂ ಮಕ್ಕಳಿಗೆ ಫನ್‌ ಎನಿಸುತ್ತದೆ. ಅಷ್ಟೇ ಅಲ್ಲದೇ ನೀವು ತಿನ್ನಬೇಡ ಎಂದು ಹೇಳುತ್ತಿದ್ದಂತೆಯೇ ಅವರಿಗೆ ಇಂಟ್ರೆಸ್ಟ್‌ ಜಾಸ್ತಿ ಆಗುತ್ತದೆ. ಹೀಗಿರುವಾಗ ಮಕ್ಕಳಿಗೆ ನೂಡಲ್ಸ್‌ ತಿನ್ನೋಕೆ ಕೊಡೋದಾ? ಬಿಡೋದಾ? ಪೋಷಕರೇ ಸಂಪೂರ್ಣ ಓದಿ..

ಮಕ್ಕಳಿಗೆ ಅಂದರೆ ಮೂರು ವರ್ಷ ಅಥವಾ ಮೇಲ್ಪಟ್ಟ ಮಕ್ಕಳಿಗೆ ಆಗೊಮ್ಮೆ ಈಗೊಮ್ಮೆ ಸ್ವಲ್ಪವೇ ಸ್ವಲ್ಪ ನೂಡಲ್ಸ್‌ ಕೊಡಿ. ಆದರೆ ಇದು ನಿತ್ಯವೂ ತಿನ್ನುವ ಆಹಾರ ಆಗದಿರಲಿ.

ನೂಡಲ್ಸ್‌ ಬೇಕೆಂದರೆ ಜೊತೆಗೆ ತರಕಾರಿ ತಿನ್ನಲೇಬೇಕು ಎಂದು ಶರತ್‌ ಹಾಕಿ. ಮೊಟ್ಟೆ, ಚಿಕನ್‌ ಅಥವಾ ತರಕಾರಿಗಳ ಜತೆಗೆ ನೂಡಲ್ಸ್‌ ನೀಡಿ.

ಇದನ್ನೂ ಓದಿ: Good Food | ಈ ಆಹಾರ ನಿಮ್ಮ ಪ್ಲೇಟ್ ನಲ್ಲಿದ್ರೆ ಅಡಿಯಿಂದ ಮುಡಿವರೆಗೂ ಸ್ಟ್ರಾಂಗ್ ಆಗಿರ್ತೀರಾ!

ನೂಡಲ್ಸ್‌ ಯಾವ ಬ್ರಾಂಡ್‌ನದ್ದು, ಅದಕ್ಕೆ ಏನೆಲ್ಲಾ ಹಾಕಿದ್ದಾರೆ ಅನ್ನೋದು ಮುಖ್ಯ. ಮೈದಾ ಇಲ್ಲದ ಮಿಲೆಟ್‌, ಸೂಜಿ ರವೆಯಿಂದ ಮಾಡಿದ ನೂಡಲ್ಸ್‌ ಮನೆಗೆ ತನ್ನಿ. ಚಪಾತಿ ಹಿಟ್ಟಿನಲ್ಲಿನೀವೇ ನೂಡಲ್ಸ್‌ ಮಾಡಿ ಕೊಡಬಹುದು.

ನೀವು ತಿನ್ನೋದು ಕಮ್ಮಿ ಮಾಡಿ, ಅಂತೆಯೇ ಅವರು ತಿನ್ನೋದು ಕಮ್ಮಿ ಮಾಡುತ್ತಾರೆ. ನೀವು ತಿನ್ನುವಾಗ ಅವರಿಗೆ ಕೊಡದೇ ಇರಲು ಆಗೋದಿಲ್ಲ. ಮೊದಲು ನಿಮ್ಮ ಆಸೆಗಳ ಮೇಲೆ ಹಿಡಿತ ಇರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !