ಬಲವಂತದ ಮತಾಂತರ: ಪಾಕ್‌ ಧರ್ಮಗುರು ಸೇರಿ 30 ಮಂದಿಗೆ ಬ್ರಿಟನ್‌ ನಿರ್ಬಂಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹಗಳನ್ನು ನಡೆಸುತ್ತಿರುವ ಪಾಕಿಸ್ತಾನದ ಮುಸ್ಲಿಂ ಧರ್ಮಗುರು ಸೇರಿದಂತೆ 30 ಮಾನವ ಹಕ್ಕುಗಳ ಉಲ್ಲಂಘನೆಗಾರಿಗೆ ಬ್ರಿಟನ್‌ ನಿರ್ಬಂಧ ವಿಧಿಸಿದೆ.
ಪಾಕ್‌ ಧರ್ಮಗುರು ಮತ್ತು ರಾಜಕಾರಣಿಯಾಗಿರುವ ಮಿಯಾನ್ ಅಬ್ದುಲ್ ಹಕ್ ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ಸ್ಥಳೀಯವಾಗಿ ಪ್ರಭಾವಶಾಲಿಯಾಗಿದ್ದಾನೆ. ಈ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರನ್ನು, ಹೆಚ್ಚಾಗಿ ಹಿಂದೂಗಳನ್ನು ಹಲವಾರು ವರ್ಷಗಳಿಂದ ಬಲವಂತದ ಮತಾಂತರದಲ್ಲಿ ತೊಡಗಿದ್ದಾನೆ ಎಂದು ಬ್ರಿಟನ್‌ ಹೇಳಿದೆ. ಕೈದಿಗಳ ಚಿತ್ರಹಿಂಸೆ, ನಾಗರಿಕರನ್ನು ಅತ್ಯಾಚಾರ ಮಾಡಲು ಸೈನ್ಯದ ಸಜ್ಜುಗೊಳಿಸುವಿಕೆ ಮತ್ತು ಇತರ ಧರ್ಮಿಯರ ಮೇಲೆ ವ್ಯವಸ್ಥಿತ ದೌರ್ಜನ್ಯಗಳು ಸೇರಿದಂತೆ ಕರ್ಮ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಈ ಪಟ್ಟಿಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!