ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುವ ಹೊತ್ತಿಗೆ ದೇಶ ಬೆಳವಣಿಗೆ ಸಾಧಿಸಿದ ಅಂಶಗಳೂ ಬಹಳಷ್ಟಿವೆ. ಅವುಗಳಲ್ಲಿ ನಾಗರಿಕ ವಿಮಾನಯಾಣದಲ್ಲಿನ ಹೆಚ್ಚಳವೂ ಒಂದು. ಸ್ವಾತಂತ್ರ್ಯ ಸಿಗುವ ಹೊತ್ತಲ್ಲಿ ಬಡತನದ ಬೇಗುದಿಯಲ್ಲಿದ್ದ ಭಾರತದಲ್ಲಿ ವಾಯುಯಾನವೆಂದರೆ ಅದು ಬಡವ ತಿನ್ನುವ ಕಡಲೆಯಲ್ಲ, ಜನಸಾಮಾನ್ಯನಿಗೆ ವಿಮಾನಯಾನ ಸಾಧ್ಯವಿಲ್ಲ ಎಂಬಂತ್ತಿತ್ತು ಪರಿಸ್ಥಿತಿ.
1951ರ ಹೊತ್ತಿಗೆ ವರ್ಷದಲ್ಲಿ ಒಟ್ಟಾರೆಯಾಗಿ 107.40 ಲಕ್ಷದಷ್ಟು ಪ್ರಯಾಣಿಕರನ್ನು ಸಾಗಾಟ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿತು. 2012ರಲ್ಲಿ 1623.05 ಲಕ್ಷದಷ್ಟು ಪ್ರಯಾಣಿಕರು ವಾಯುಮಾರ್ಗದಲ್ಲಿ ಸಂಚರಿಸಿದ್ದಾರೆ. ಈ ಸಂಖ್ಯೆ 2020ರ ಹೊತ್ತಿಗೆ ದ್ವಿಗುಣ ಗೊಂಡು 3410.50ಲಕ್ಷದಷ್ಟು ಪ್ರಯಾಣಿಕರು ವಾಯುಯಾನ ಮಾಡಿದ್ದಾರೆ. ವಾಯು ಮಾರ್ಗದ ಮೂಲಕ ಸರಕು ಸಾಗಾಟವೂ ಹೆಚ್ಚಿದೆ.
2017ರಲ್ಲಿ ಜನಸಾಮಾನ್ಯನ ವಿಮಾನ ಹಾರಾಟದ ಕನಸು ನನಸು ಮಾಡಲೆಂದೇ ಉಡಾನ್ ಯೋಜನೆ ಜಾರಿಗೊಳಿಸಿದ್ದು 1.04ಕೋಟಿಯಷ್ಟು ಜನರು ಅದರಲ್ಲಿ ಪ್ರಯಾಣಿಸಿದ್ದಾರೆ.
65 ವಿಮಾನ ನಿಲ್ದಾಣಗಳು, 8 ಹೆಲಿಪೋರ್ಟ್ ಗಳು ಮತ್ತು 2 ವಾಟರ್ ಏರೋಡ್ರೋಮ್‌ಗಳು UDAN ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಾಯುಸಾರಿಗೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.