ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರಪ್ರದೇಶದ ಪಿಲಿಭಿತ್ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ.
ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ ಕೂದಲು ಸಿಕ್ಕಿದ್ದರಿಂದ ಕೋಪಕೊಂಡ ಪತಿ, ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕೈಕಾಲು ಕಟ್ಟಿ ಬಲವಂತವಾಗಿ ಲೈಂಗಿಕ ಸಂಭೋಗ ನಡೆಸಲು ಯತ್ನಿಸಿದ್ದಾನೆ.ಆದರೆ ಆಕೆ ಅದನ್ನು ವಿರೋಧಿಸಿದ್ದು, ಇದರಿಂದ ಮತ್ತಷ್ಟು ಕೋಪಗೊಂಡು ಆಕೆಯ ತಲೆ ಬೋಳಿಸಿದ್ದಾನೆ.
ಪಿಲಿಭಿತ್ನ ಗಜ್ರೌಲಾ ಪೊಲೀಸ್ ಠಾಣೆ ಪತಿ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ಇ
ಈ ಕೃತ್ಯಕ್ಕೆ ಪತಿಗೆ ಆತನ ಪೋಷಕರೂ ಸಾಥ್ ನೀಡಿದ್ದಾರೆ. ಮನಬಂದಂತೆ ಥಳಿಸುತ್ತಿದ್ದರೂ, ನನ್ನ ಅತ್ತೆ-ಮಾವ ಸಹಾಯಕ್ಕೆ ಬರಲಿಲ್ಲ. ಮೃಗೀಯವಾಗಿ ವರ್ತಿಸುತ್ತಿರುವುದನ್ನು ಕಂಡು ಅತ್ತೆ-ಮಾವ ಮಜಾ ತೆಗೆದುಕೊಳ್ಳುತ್ತಿದ್ದರು. ನನ್ನನ್ನು ರಕ್ಷಿಸದೆ ನನ್ನ ಗಂಡನಿಗೆ ಸಾಥ್ ನೀಡಿದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಸದ್ಯ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಆರೋಪಿ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪೊಲೀಸರು ಪ್ರಕರಣ (FIR) ದಾಖಲಿಸಿ, ಆರೋಪಿ ಪತಿಯನ್ನ ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ತವರು ಮನೆಗೆ ಕಳುಹಿಸಿಕೊಡಲಾಗಿದೆ.