ಯೆಮೆನ್‌ನ ಅಂತರ್ಯುದ್ಧದಲ್ಲಿ 11,000 ಕ್ಕೂ ಹೆಚ್ಚು ಮಕ್ಕಳು ಸಾವು, ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ : ವಿಶ್ವಸಂಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸುಮಾರು ಎಂಟು ವರ್ಷಗಳ ಹಿಂದೆ ಉಲ್ಬಣಗೊಂಡ ಯೆಮೆನ್‌ನ ಅಂತರ್ಯುದ್ಧ 11,000 ಕ್ಕೂ ಹೆಚ್ಚು ಮಕ್ಕಳನ್ನು ತೀವ್ರವಾಗಿ ಕಾಡಿದೆ. ಅದರಲ್ಲಿ ಹೆಚ್ಚಿನವರು ಸಾವನ್ನಪ್ಪಿದರೆ ಉಳಿದವರು ಅಂಗವಿಕಲರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
“ಈ ಸಂಘರ್ಷದ ನಿಜವಾದ ಸಂಖ್ಯೆಯು ನಾವು ಅಂದಾಜಿಸಿದ್ದಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ” ಎಂದು ಮಕ್ಕಳ ಸಂಸ್ಥೆ ಯೂಸಿಸೆಫ್ ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟಿನ ಸಾವುನೋವುಗಳ ಬಗ್ಗೆ ಹೇಳಿದೆ.
“ಅಂತರ್ಯುದ್ಧದಿಂದ ಸಾವಿರಾರು ಮಕ್ಕಳು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ, ಜನರು ರೋಗಗಳು ಹಾಗೂ ಹಸಿವಿನಿಂದ ಸಾಯುವ ಅಪಾಯ ಎದುರಿಸುತ್ತಿದ್ದಾರೆ ” ಎಂದು ಯೂನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರೀನ್ ರಸೆಲ್ ಹೇಳಿದರು. ಸುಮಾರು 2.2 ಮಿಲಿಯನ್ ಯೆಮೆನ್ ಮಕ್ಕಳು ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಅವರಲ್ಲಿ ಕಾಲು ಭಾಗದಷ್ಟು ಮಕ್ಕಳು ಐದಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಹೆಚ್ಚಿನವರು ಕಾಲರಾ, ದಡಾರ ಮತ್ತು ಇತರ ರೋಗ ಬಾಧೆಗಳಿಂದ ತೀವ್ರ ಅಪಾಯದಲ್ಲಿದ್ದಾರೆ ಎಂದು ಯುನಿಸೆಫ್ ಹೇಳಿದೆ.
2014 ರಲ್ಲಿ ಇರಾನ್ ಬೆಂಬಲಿತ ಹುತಿ ಬಂಡುಕೋರರು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಯೆಮೆನ್ ಯುದ್ಧವು ಪ್ರಾರಂಭವಾಯಿತು.  ಅದರ ಮುಂದಿನ ವರ್ಷ ಯೆಮನ್ ಸರ್ಕಾರವನ್ನು ಬೆಂಬಲಿಸಲು ಸೌದಿ ನೇತೃತ್ವದ ಪಡೆಗಳು ಮಧ್ಯಪ್ರವೇಶಿಸಿದ್ದರಿಂದ ಯುದ್ಧ ತೀವ್ರವಾಯಿತು. ಅಸುರಕ್ಷಿತ ಕುಡಿಯುವ ನೀರು, ರೋಗ ಹರಡುವಿಕೆ, ಹಸಿವು ಮತ್ತು ಇತರ ಪರಿಣಾಮಗಳ ಮೂಲಕ ಹೋರಾಟದ ಪರಿಣಾಮವಾಗಿ ಅಥವಾ ಪರೋಕ್ಷವಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ.
ಮಾರ್ಚ್ 2015 ಮತ್ತು ಸೆಪ್ಟೆಂಬರ್ 2022 ರ ನಡುವೆ 3,774 ಮಕ್ಕಳ ಸಾವುಗಳನ್ನು ಸರ್ಕಾರಿ ಸಂಸ್ಥೆಗಳು ದೃಢೀಕರಿಸುತ್ತವೆ.
“ಕದನ ವಿರಾಮದ ತುರ್ತು ನವೀಕರಣವು ನಿರ್ಣಾಯಕ ಮಾನವೀಯ ಪ್ರವೇಶವನ್ನು ಅನುಮತಿಸುವ ಸಕಾರಾತ್ಮಕ ಮೊದಲ ಹೆಜ್ಜೆಯಾಗಿದೆ” ಎಂದು ಕ್ಯಾಥರೀನ್ ರಸ್ಸೆಲ್ ಹೇಳಿದ್ದಾರೆ.. ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು ಯೆಮನ್‌ ಗೆ 484.4 ಮಿಲಿಯನ್ ಡಾಲರ್‌ ಹಣವನ್ನು ನೀಡುವಂತೆ ಯೂನಿಸೆಫ್ ವಿಶ್ವಸಂಸ್ಥೆಗೆ ಮನವಿ ಮಾಡಿದೆ.
“ಯೆಮೆನ್‌ನ ಮಕ್ಕಳು ಯೋಗ್ಯ ಭವಿಷ್ಯ ಹೊಂದಬೇಕಾದರೆ ತಕ್ಷಣವೇ ಅಂತರ್ಯುದ್ಶಧ ನಿಲ್ಲಬೇಕಿದೆ” ಎಂದು ರಸೆಲ್ ಕರೆನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!