VIRAL VIDEO: ನಿನ್ನ ಧೈರ್ಯ ಮೆಚ್ಚುವಂಥದ್ದು! ಸರ ಕದ್ದ ಖದೀಮರಿಗೆ ಯುವತಿ ಗೂಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸರಗಳ್ಳತನ ದೇಶದೆಲ್ಲಡೆ ಎಗ್ಗಿಲದೆ ನಡೆಯುತ್ತಿದೆ. ಖದೀಮರ ಕೈಗೆ ಸಿಕ್ಕಿ ಅದೆಷ್ಟೋ ಮಹಿಳೆಯರು ಪ್ರಾಣ ಕೂಡ ಕಳೆದುಕೊಂಡಿರುವ ಉದಾಹರಣೆಗಳಿವೆ. ಇನ್ನೂ ಕೆಲ ಮಹಿಳೆಯರು ಧೈರ್ಯದಂದ ಹೋರಾಡಿ ಕಳ್ಳರಿಗೆ ಕೈಲೂಟ ತಿನ್ನುವಂತೆ ಮಾಡಿದ್ದಾರೆ. ಇಂತಹ ಗಟನೆಗಳ ಸಾಲಿಗೆ ಈ ಯುವತಿ ಸೇರಿದ್ದಾಳೆ. ಉತ್ತರ ಪ್ರದೇಶದ ಮೀರತ್ ನಲ್ಲಿ ಇಬ್ಬರು ಚೈನ್ ಸ್ನಾಚರ್ಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯ ಕೊರಳಲ್ಲಿದ್ದ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಕೂಡಲೇ ಕಾಳಿ ಅವತಾರ ಎತ್ತಿದ ಯುವತಿ ಬೈಕ್‌ನಲ್ಲಿದ್ದ ಕಳ್ಳರ ಬೆವರಿಳಿಸಿದ್ದಾಳೆ.

ರಸ್ತೆಯಲ್ಲಿ ಎಳೆದೊಯ್ದರೂ ಬಿಡದೆ ಕಳ್ಳನನ್ನು ಕಳೆಕ್ಕೆಳೆದು ಹಿಗ್ಗಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯುವತಿಯ ಶೌರ್ಯ ಹಾಗೂ ಕಳ್ಳರ ವಿರುದ್ಧ ಹೋರಾಡಿದ ರೀತಿಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್. ಈ ಯುವತಿಯ ವರ್ತನೆ ಎಲ್ಲರಿಗೂ ಮಾದರಿಯಾಗಿದೆ. ಕೊನೆಗೆ ಪೊಲೀಸರನ್ನು ಕರೆಸಿ ಚೈನ್ ಸ್ನಾಚರ್ ಗಳನ್ನು ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here