ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಹಾವಳಿಯಿಂದ ಎರಡು ವರ್ಷ ಮಂಕಾಗಿದ್ದ ಹೊಸ ವರ್ಷ ಸಂಭ್ರಮಾಚರಣೆ ಈ ವರ್ಷ ಮತ್ತೆ ಅದ್ಧೂರಿಯಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ನ್ಯೂ ಇಯರ್‌ಗಾಗಿ ಬೆಂಗಳೂರು ಸಜ್ಜಾಗುತ್ತಿದ್ದು, ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಈಗಲೇ ಟೇಬಲ್ ಬುಕ್ಕಿಂಗ್ ನಡೆಯುತ್ತಿದೆ. ಇನ್ನು ಹೊಟೇಲದ ಹಾಗೂ ಪಬ್‌ಗಳ ಮಾಲೀಕರು ಸೆಲೆಬ್ರಿಟಿಗಳನ್ನು ಕರೆಯಿಸಿ ಹೊಸ ವರ್ಷದ ಪಾರ್ಟಿ ಮಾಡಲು ಸನ್ನದ್ಧರಾಗಿದ್ದಾರೆ.
ಕಳೆದೆರಡು ವರ್ಷದಿಂದ ಕೊರೋನಾ ಛಾಯೆಯಲ್ಲಿ ಯಾವುದೇ ರೀತಿಯ ಆಚರಣೆ ಇಲ್ಲದಂತಾಗಿತ್ತು. ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸುವ ಮಾಲೀಕರು ಕಳೆದ ಎರಡು ವರ್ಷದ ನಷ್ಟವನ್ನು ಈ ಬಾರಿ ತುಂಬಿಸಿಕೊಳ್ಳೋದಕ್ಕೆ ರೆಡಿಯಾಗಿದ್ದಾರೆ.
ಡಿಸೆಂಬರ್ 31ರ ಮಧ್ಯ ರಾತ್ರಿ ಸಿಲಿಕಾನ್ ಸಿಟಿಯ ಮುಖ್ಯ ನಗರಗಳು ದೀಪಗಳು, ಆಚರಣೆಯಿಂದ ಕಂಗೊಳಿಸುತ್ತವೆ. ಈ ಬಾರಿಯೂ ವಿಜೃಂಭಣೆಯ ಹೊಸ ವರ್ಷ ಸಂಭ್ರಮಾಚರಣೆಗೆ ಯಾವುದೇ ನಿರ್ಬಂಧ ಹೇರಬೇಡಿ ಎಂದು ಹೊಟೇಲ್, ರೆಸ್ಟೋರೆಂಟ್ ಹಾಗೂ ಪಬ್ ಮಾಲೀಕರು ಮನವಿ ಮಾಡುತ್ತಿದ್ದಾರೆ.