ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣ್ ಅಭಿನಯದ ಪಠಾಣ್ ಸಿನಿಮಾದ ಹಾಡೊಂದು ಅಪ್‌ಲೋಡ್ ಆದ ಕೆಲವೇ ನಿಮಿಷದಲ್ಲಿ ಒಂದು ಮಿಲಿಯನ್ ವ್ಯೂವ್ಸ್ ಪಡೆದಿದೆ.
ಹೌದು ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ಈಗಷ್ಟೇ ರಿಲೀಸ್ ಆಗಿದ್ದು, ಲಕ್ಷಾಂತರ ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಓಂ ಶಾಂತಿ ಓಂ ಹಾಗೂ ಹ್ಯಾಪಿ ನ್ಯೂ ಇಯರ್‌ನಲ್ಲಿ ದೀಪಿಕಾ ಹಾಗೂ ಶಾರುಖ್ ಒಟ್ಟಾಗಿ ನಟಿಸಿದ್ದು, ಕೆಮಿಸ್ಟ್ರಿ ಸೂಪರ್ ಆಗಿದೆ ಎಂದಿದ್ದರು.
ಈಗ ಮತ್ತದೇ ಕೆಮಿಸ್ಟ್ರಿ ತೆರೆ ಮೇಲೆ ಕಾಣಲಿದ್ದು, ಸಿನಿಮಾ ವೀಕ್ಷಣೆಗೆ ಜನ ಉತ್ಸುಕರಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಠಾಣ್ ಜನವರಿ 25ಕ್ಕೆ ರಿಲೀಸ್ ಆಗಲಿದೆ. ವಿಶಾಲ್ ಶೇಖರ್ ಮ್ಯೂಸಿಕ್ ಡೈರೆಕ್ಷನ್ ಇರುವ ಹಾಡು ಜನರಿಗೆ ಇಷ್ಟವಾಗಿದೆ ಎನ್ನೋಕೆ ಈ ವ್ಯೂವ್ಸ್ ಸಾಕ್ಷಿ!