ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು – 1
ಸಕ್ಕರೆ – 2 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಮೊಸರು – 1 ಕಪ್
ಐಸ್ ತುಂಡುಗಳು – ಸ್ವಲ್ಪ
ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
ಹುಳಿ ಅಥವಾ ಶೇಖರಿಸಿಟ್ಟ ಮೊಸರು ಬದಲಿಗೆ ತಾಜಾ ಸಿಹಿ ಮೊಸರು ಬಳಸಿದರೆ ಲಸ್ಸಿ ಹೆಚ್ಚು ರುಚಿ. ಮೊದಲು ಬಾಳೆಹಣ್ಣಿನ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ. ಒಂದು ಕಪ್ ತಾಜಾ ಮೊಸರು, ಸಕ್ಕರೆಯ ಬದಲಿಗೆ ಸಕ್ಕರೆಯ ಪುಡಿಯನ್ನು ಬಳಸಿದರೆ ಚೆನ್ನಾಗಿ ಮಿಶ್ರಣಗೊಳ್ಳುತ್ತದೆ. ಏಲಕ್ಕಿಯನ್ನು ಮೃದುವಾದ ಪುಡಿಯಾಗಿ ಮಾಡಿಕೊಳ್ಳಿ. ಮಿಕ್ಸರ್ ಜಾರ್‌ನಲ್ಲಿ ಬಾಳೆಹಣ್ಣು, ಎರಡು ಚಮಚ ಮೊಸರು ಸಕ್ಕರೆ ಪುಡಿ, ನೆನೆಸಿದ ಗೋಡಂಬಿ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ನಿಧಾನವಾಗಿ ಮಿಕ್ಸಿ ಮಾಡಿ. ಅಗತ್ಯವಿದ್ದರೆ ಮಾತ್ರ ನೀರನ್ನು ಬಳಸಬಹುದು. ಹೆಚ್ಚು ನೀರು ಹಾಕಿದ್ರೆ ತೆಳುವಾಗಬಹುದು ಎಚ್ಚರಿಕೆ. ಮೊಸರಿನಲ್ಲಿ ಮಾಡೋದ್ರಿಂದ ಗಟ್ಟಿ ಹಾಗೂ ರುಚಿ ಕೂಡ ಚೆನ್ನಾಗಿರುತ್ತದೆ. ಈಗ ಒಂದು ಗ್ಲಾಸ್ ತೆಗೆದುಕೊಂಡು ಅದಕ್ಕೆ ನಾಲ್ಕು ಐಸ್ ತುಂಡುಗಳನ್ನು ಸೇರಿಸಿ ಮತ್ತು ಅದರಲ್ಲಿ ತಯಾರಿಸಿದ ಬಾಳೆಹಣ್ಣಿನ ರಸವನ್ನು ಸುರಿಯಿರಿ. ರೆಸ್ಟಾರೆಂಟ್ ಲುಕ್ ನೀಡಲು ಕೆಲವು ಒಣದ್ರಾಕ್ಷಿಗಳಿಂದ ಅಲಂಕರಿಸಿ. ಅಷ್ಟೇ… ತುಂಬಾ ರುಚಿಯಾದ ಬಾಳೆಹಣ್ಣು ಲಸ್ಸಿ ರೆಡಿ.