ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ವೈಟ್ ಲಿಫ್ಟರ್ ಆಗಿದ್ದ ಪುತ್ತೂರು ನಿವಾಸಿ ರಾಜೇಂದ್ರ ಪ್ರಸಾದ್(39) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಜೇಂದ್ರ ಅವರು ಪುತ್ತೂರಿನ ಪಡೀಲ್ ನಲ್ಲಿರುವ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿದ್ದಾರೆ.
ಮೂಲತಃ ಪುತ್ತೂರಿನ ಕೆಮ್ಮಿಂಜೆ ನಿವಾಸಿಯಾಗಿದ್ದ ರಾಜೇಂದ್ರ ಪ್ರಸಾದ್ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಕಾಲೇಜ್ ಸಮಯದಲ್ಲಿ ವೈಟ್ ಲಿಫ್ಟರ್ ಆಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ನಂತರ ಎಸ್.ಡಿ.ಎಂ. ಕಾಲೇಜಿನಲ್ಲಿ ವೈಟ್ ಲಿಫ್ಟರ್ ಕೋಚ್ ಆಗಿ , ಆ ನಂತರ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕೋಚ್ ಆಗಿ ನೇಮಕವಾದರು. ಇವರಿಂದ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.