ನಿಮ್ಮ ಸಾಧನೆ ಒಂದು ಪ್ರಶಸ್ತಿಯಿಂದ ನಿರ್ಧರಿಸಲು ಸಾಧ್ಯವಿಲ್ಲ: ಕಣ್ಣೀರಿಟ್ಟ ರೊನಾಲ್ಡೊಗೆ ಕೊಹ್ಲಿಯ ಧೈರ್ಯದ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್‍ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಪೋರ್ಚುಗಲ್ ಸೋತಿದ್ದು, ಇದರಿಂದ ಭಾವುಕರಾಗಿದ್ದ ಸ್ಟಾರ್ ಫುಟ್‍ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊಗೆ ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಸಾಂತ್ವನದ ಮಾತುಗಳನ್ನಾಡಿದ್ದಾರೆ.

ಕತಾರ್ ನಲ್ಲಿ ಕ್ವಾರ್ಟರ್ ಫೈನಲ್ ಸೋಲಿನೊಂದಿಗೆ ಪೋರ್ಚುಗಲ್‍ನ ಅಭಿಯಾನ ಅಂತ್ಯವಾಗುತ್ತಿದ್ದಂತೆ ರೊನಾಲ್ಡೊ ಕಣ್ಣೀರಿಟ್ಟಿದ್ದರು. ಇದೀಗ ಈ ಬಗ್ಗೆ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

‘ಕ್ರೀಡೆಗೆ ಹಾಗೂ ಕ್ರೀಡಾಭಿಮಾನಿಗಳಿಗಾಗಿ ನೀವು ಇಲ್ಲಿಯವರೆಗೂ ಮಾಡಿರುವ ಸಾಧನೆಯನ್ನು ಒಂದು ಪ್ರಶಸ್ತಿಯಿಂದ ನಿರ್ಧರಿಸಲು ಸಾಧ್ಯವಿಲ್ಲ. ನೀವು ಅಭಿಮಾನಿಗಳಿಗೆ ಬೀರಿರುವ ಪ್ರಭಾವವನ್ನು ಯಾವುದೇ ಶೀರ್ಷಿಕೆಯಿಂದ ವಿವರಿಸಲು ಸಾಧ್ಯವಿಲ್ಲ. ನನ್ನನ್ನು ಸೇರಿದಂತೆ ವಿಶ್ವದಾದ್ಯಂತ ಇರುವ ನಿಮ್ಮ ಅಭಿಮಾನಿಗಳು ನಿಮ್ಮ ಆಟವನ್ನು ನೋಡುವ ಮೂಲಕ ಆನಂದಿಸಿದ್ದೇವೆ. ನಿಮ್ಮ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ನೀವು ದೇವರಿಂದ ಪಡೆದಿರುವ ವರ ಇದಾಗಿದೆ. ಪಂದ್ಯದ ಪ್ರತಿಯೊಂದು ಕ್ಷಣದಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರ ನೀವಾಗಿದ್ದೀರಿ. ನಿಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯೇ ಇದಕ್ಕೆ ಕಾರಣ. ನೀವು ನನ್ನ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಕಾರ್ಟರ್‍ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ 1-0 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!