Tuesday, December 2, 2025

HEALTH | ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇರೋ ಒಂದು ಸಮಸ್ಯೆ ಕಬ್ಬಿಣಾಂಶ ಕೊರತೆ! ಸರಿ ಮಾಡೋದು ಹೇಗೆ?

ದೇಹ ಸದಾ ಚುರುಕಾಗಿ ಕೆಲಸ ಮಾಡಲು ಕಬ್ಬಿಣಾಂಶ ಅನಿವಾರ್ಯ. ವಿಶೇಷವಾಗಿ ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ಮತ್ತು ಮಹಿಳೆಯರ ಆರೋಗ್ಯಕ್ಕೆ ಇದು ಅತ್ಯಂತ ಮುಖ್ಯ ಪೋಷಕಾಂಶ. ಆದರೆ ಇತ್ತೀಚಿನ ಅಸಮರ್ಪಕ ಆಹಾರ ಪದ್ಧತಿಯಿಂದಾಗಿ ಹಲವಾರು ಮಕ್ಕಳು ಹಾಗೂ ದೊಡ್ಡವರು ಕಬ್ಬಿಣಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಈ ಕೊರತೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ದಣಿವು, ರಕ್ತಹೀನತೆ ಹಾಗೂ ಬೆಳವಣಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಕಬ್ಬಿಣಾಂಶ ಕೊರತೆಯ ಲಕ್ಷಣಗಳು:
ಅತಿಯಾಗಿ ದಣಿವು, ಚರ್ಮ ತೆಳುವಾಗುವುದು, ಕೂದಲು ಉದುರುವುದು, ಹಸಿವು ಕಡಿಮೆಯಾಗುವುದು, ಉಸಿರಾಟದ ತೊಂದರೆ, ಮಕ್ಕಳಲ್ಲಿ ತಕ್ಕಮಟ್ಟಿನ ಬೆಳವಣಿಗೆ ಆಗದಿರುವುದು ಪ್ರಮುಖ ಸೂಚನೆಗಳು. ಹಿಮೋಗ್ಲೋಬಿನ್ ಮಟ್ಟ 11ಕ್ಕಿಂತ ಕಡಿಮೆಯಾಗಿದ್ದರೆ ಕಬ್ಬಿಣದ ಕೊರತೆಯ ಸಾಧ್ಯತೆ ಇರುತ್ತದೆ.

ಕಬ್ಬಿಣಾಂಶ ಹೆಚ್ಚಿಸಿಕೊಳ್ಳುವ ಮಾರ್ಗಗಳು:
ಮಟನ್, ಚಿಕನ್, ಮೀನು, ರಾಗಿ, ಬೇಳೆ, ಮೊಳಕೆಕಾಳು, ಪಾಲಕ್, ನುಗ್ಗೆ ಸೊಪ್ಪು, ಕರಿಬೇವು, ಕಪ್ಪು ಖರ್ಜೂರ, ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳನ್ನು ಆಹಾರದಲ್ಲಿ ಸೇರಿಸಬೇಕು. ವಿಟಮಿನ್ C ಇರುವ ಪದಾರ್ಥಗಳು ಕಬ್ಬಿಣ ಹೀರಿಕೊಳ್ಳಲು ಸಹಾಯಕ.

ತಪ್ಪಿಸಬೇಕಾದ ಆಹಾರ:
ಚಹಾ, ಕಾಫಿ, ಕೋಕ್‌ನಂತಹ ಕಫೀನ್ ಪಾನೀಯಗಳನ್ನು ಕಬ್ಬಿಣಯುಕ್ತ ಆಹಾರದೊಂದಿಗೆ ಸೇವಿಸುವುದನ್ನು ತಪ್ಪಿಸಬೇಕು.

ಸಮತೋಲನ ಆಹಾರ ಮತ್ತು ವೈದ್ಯರ ಸಲಹೆಯಿಂದ ಕಬ್ಬಿಣಾಂಶ ಕೊರತೆಯನ್ನು ಸರಿಪಡಿಸಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!