ಟ್ವಿಟರ್‌ನಿಂದ ಈ ಮುಖ್ಯ ಸೌಲಭ್ಯ ತೆಗೆದು ಹಾಕಿದ ಎಲಾನ್ ಮಸ್ಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೈಬರ್ ಸುರಕ್ಷತೆಗೆ ಒತ್ತು ನೀಡಲು ಟ್ವಿಟರ್‌ನಲ್ಲಿ ಲೈವ್ ಲೊಕೇಷನ್ ಶೇರ್ ಮಾಡುವ ಸೌಲಭ್ಯವನ್ನು ಎಲಾನ್ ಮಸ್ಕ್ ತೆಗೆದುಹಾಕುವುದಾಗಿ ಹೇಳಿದ್ದಾರೆ.

ಖಾತೆಯಿಂದ ಲೈವ್ ಲೊಕೇಷನ್‌ಗಳನ್ನು ಬಹಿರಂಗವಾಗಿ ಖಾತೆಯಲ್ಲಿ ಶೇರ್ ಮಾಡಿದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದಿದ್ದಾರೆ. ಯಾರಾದರೂ ಲೈವ್ ಲೊಕೇಷನ್ ಮಾಹಿತಿಯನ್ನು ಡಾಕ್ಸಿಂಗ್ ಮಾಡಿದರೆ ಆ ಖಾತೆಯೂ ರದ್ದಾಗಲಿದೆ. ಭೌತಿಕ ಸುರಕ್ಷತೆಯ ಉಲ್ಲಂಘನೆಯಾಗಲಿದೆ ಎಂದು ಹೇಳಿದ್ದಾರೆ.

ತಮ್ಮ ಲೈವ್ ಲೊಕೇಷನ್‌ನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡಬಹುದು, ಬಹಿರಂಗವಾಗಿ ಹಾಕುವಂತಿಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸ್ಥಳಗಳ ಮಾಹಿತಿ ಹಂಚಿಕೊಳ್ಳಲು ಅನುಮತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!